ಮುಂಬಯಿ, ಡಿ.18: ಮಹಾನಗರದಲ್ಲಿನ ಧಾರ್ಮಿಕ ಸಾಮಾಜಿಕ ಸಂಸ್ಥೆಯು ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನವು ವರ್ಷಾಂತ್ಯದಲ್ಲಿ ಕೃಷ್ಣಾರ್ಪಣ ರೂಪವಾಗಿ ನಡೆಸುತ್ತಿರುವ ವಾರ್ಷಿಕ ಧಾರ್ಮಿಕ್ಸೋವವನ್ನು ಇಂದಿಲ್ಲಿ ಆದಿತ್ಯವಾರ ಅಂಧೇರಿ ಪಶ್ಚಿಮದ ಇರ್ಲಾದಲ್ಲಿನ ಆದಮಾರು ಮಠದ ಪಾವಿತ್ರ್ಯ ಆವರಣದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂ ದಿಗೆ ಶಾಸ್ತ್ರೋಕ್ತವಾಗಿ ನೆರವೇರಿಸಿತು.

skvm-3

ಈ ಬಾರಿ ಹತ್ತೊಂಬತ್ತನೇ ವಾರ್ಷಿಕ ಧಾರ್ಮಿಕ್ಸೋವ ನಿಮಿತ್ತ ಪ್ರತಿಷ್ಠಾನದ ಸ್ಥಾಪಕ ಮತ್ತು ಅಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಅವರ ನೇತ್ರತ್ವದಲ್ಲಿ ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನೆ, ಋತ್ವಿಗೆ ವರಣ, ಸೇವಾಕರ್ತರೊಂದಿಗೆ ಮಹಾ ಸಂಕಲ್ಪ, ಪ್ರಧಾನ ಹೋಮ,ಅಷ್ಠೋತ್ತರ ಸಹಸ್ರ ಮೋದಕ ಸಾಮೂಹಿಕ ಮಹಾಗಣಪತಿ ಯಾಗವೂ ಹಾಗೂ ವಿಷ್ಣುಸಹಸ್ರನಾಮ ಪೂಜೆ, ಶ್ರೀ ಲಕ್ಷ್ಮೀನಾರಾಯಣ ಮಹಾಪೂಜೆ, ಮಧ್ಯಾಹ್ನ ಮಂಗಳಾರತಿ ಹಾಗೂ ಪೂರ್ಣಾಹುತಿ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿ ನೆರೆದ ಭಕ್ತಾಭಿಮಾನಿಗಳನ್ನು ಅನುಗ್ರಹಿಸಿದರು. ಸಹ ಪುರೋಹಿತರುಗಳಾದ ಶ್ರೀನಿವಾಸ ಭಟ್ ಮಾಳ, ಶ್ರೀಪತಿ ಭಟ್ ಅಂಬೇಲಿ, ವಾಸುದೇವ ಉಡುಪ, ಜನಾರ್ಧನ ಅಡಿಗ, ಗೋಪಾಲ ಭಟ್, ಎನ್.ಕೃಷ್ಣಮೂರ್ತಿ ಭಟ್, ವಿಷ್ಣು ಅಡಿಗ, ಬಾಲಚಂದ್ರ ಭಟ್ ಸಹಕರಿಸಿದ್ದು, ಶ್ರೀಕರ ಭಟ್, ಕೃಷ್ಣ ಭಟ್, ರಮಾನಾಥ ಭಟ್, ಭವಾನಿಶಂಕರ ಭಟ್, ದಿನೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

skvm-1

ಮಧ್ವೇಶ ಭಜನಾ ಮಂಡಳಿ, ವಾಗ್ದೇವಿ ಭಜನಾ ಮಂಡಳಿ, ಮಹಾಲಕ್ಷ್ಮೀ ಭಜನಾ ಮಂಡಳಿ ಅವರಿಂದ ಭಜನೆ, ಹರೀಶ ಪೂಜಾರಿ ಬಳಗದ ಚೆಂಡೆವಾದ್ಯ ಮೇಳ ನಡೆಸಿದ್ದು, ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ವಿಧಿವತ್ತಾಗಿ ಜರುಗಿಸಲ್ಪಟ್ಟಿದ್ದು, ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಆಶೀರ್ವಚನ ನುಡಿಗಳನ್ನಾಡಿ ಅಧ್ಯಾತ್ಮಿಕತೆ ಭೂಗೋಳದ ಅಗ್ರಿಮ ಶಕ್ತಿಯಾಗಿದ್ದು, ಮಂಡಲ ಮುಖೇನ ಸಮರ್ಪಿಸಿದ ಈ ಪೂಜೆ ಭೂಲೋಕದ ಕಲ್ಯಾಣಕ್ಕೆ ವರವಾಗುತ್ತಿದೆ. ಧರ್ಮದ ಸಾಕ್ಷಾತ್ಕಾರವೇ ಮನುಕುಲದ ನಿಜವಾದ ಜೀವನವಾಗಿದ್ದು, ಧರ್ಮದ ಪಾಲನೆಯಿಂದಲೇ ಜೀವನ ಸೌಭಾಗ್ಯ ಪಾಪ್ತಿ ಆಗುವುದು ಎಂದು ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು.

skvm-5

ಗಣ್ಯರಾದ ಡಾ| ವೈ.ಶಿವಾನಂದ ಶೆಟ್ಟಿ, ಸುಧೀರ ಎಲ್.ಶೆಟ್ಟಿ, ಸುಧೀರ್ ಕೆ.ಶೆಟ್ಟಿ, ಪ್ರಕಾಶ್ ಭಂಡಾರಿ, ರೇಣುಕಾ ಭಂಡಾರಿ, ,ಪ್ರತಿಷ್ಠಾನದ ಗೌರವ ಪ್ರಧಾನ ಕಾರ್ಯದರ್ಶಿ ಸುಮ ವಿಶ್ವನಾಥ್ ಭಟ್, ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರೀ, ಉಪಾಧ್ಯಕ್ಷ ಗೋಪಾಲ್ ಎಸ್.ಪುತ್ರನ್, ಜೊತೆ ಕಾರ್ಯದರ್ಶಿಗಳಾದ ಕುಕ್ಕೇಹಳ್ಳಿ ಸದಾನಂದ ಶೆಟ್ಟಿ ಮತ್ತು ರವೀಂದ್ರ ಕರ್ಕೇರ, ವಿಶ್ವಸ್ಥ ಸದಸ್ಯರುಗಳಾದ ಅಶೋಕ್ ಕುಮಾರ್ ಶೆಟ್ಟಿ ಪೆರ್ಮುದೆ, ಕಳತ್ತೂರು ವಿಶ್ವನಾಥ ಶೆಟ್ಟಿ, ಹರೀಶ್ ಎಸ್.ಶೆಟ್ಟಿ, ಮಹಿಳಾ ವಿಭಾಗದ ಮುಖ್ಯಸ್ಥೆ ಸುನಂದ ಉಪಾಧ್ಯಾಯ, ಕಾರ್ಯದರ್ಶಿ ಸುಶೀಲಾ ಎಸ್.ದೇವಾಡಿಗ, ಸಂಸ್ಥೆಯ ಕಾರ್ಯಕಾರಿ ಸಮಿತಿಯ ಬಾಲಚಂದ್ರ ಭಟ್, ಹ್ಯಾರಿ ಆರ್.ಸಿಕ್ವೇರಾ, ಮನೀಷ್ ಸಾವಂತ್, ರಮೇಶ್ ಕೆ.ಶೆಟ್ಟಿ, ಅಶೋಕ್ ಪಕ್ಕಳ,ಜನಾರ್ದನ ಸಸಿಹಿತ್ಲು, ಶೇಖರ ಸಸಿಹಿತ್ಲು, ವಾದಿರಾಜ ಕುಬೇರ್, ದಿನೇಶ್ ಕರ್ಕೇರ, ಮಾಧವ ಕೋಟ್ಯಾನ್, ಸುಧಾಕರ ಶೆಟ್ಟಿ, ವಿಶ್ವನಾಥ ಸಿ.ಶೆಟ್ಟಿ, ಸುರೇಸ್ ಗಿಡ್‍ಬಿಡಿ, ಭೀಮ್ ಶಿಂಧೆ, ಸುಧೀರ ಅಮೀನ್, ಪದ್ಮನಾಭ ಸಸಿಹಿತ್ಲು, ಜಗನ್ನಾಥ ಪುತ್ರನ್, ಮೋಹಿತ್ ಕರ್ಕೇರ, ವೇದಾಂತ್ ವಿಕ್ಯಾತ್, ಮಹಿಳಾ ವಿಭಾಗದ ಛಾಯಾ ರಾವ್, ವಿಜಯಾ ರಾವ್, ಶ್ಯಾಮಲಾ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್ )

By suddi9

Leave a Reply

Your email address will not be published. Required fields are marked *