ಬಂಟ್ವಾಳ: ಸಿವಿಲ್ ಜಡ್ಜ್ ಹಿರಿಯ ವಿಭಾಗ ಜೆ.ಎಂ.ಫಿ.ಸಿ.ನ್ಯಾಯಾಲಯವು ಭೂಸ್ವಾ„ೀನ ಪ್ರಕರಣ ಎಲ್ಎಸಿ 111/90ರಲ್ಲಿ ಮಂಗಳೂರಿನ ಭೂಸ್ವಾಧೀನಾಧಿಕಾರಿ ಸಹಾಯಕ ಕಮೀಶನರಿಗೆ ರಸ್ತೆ ನಿರ್ಮಿಸುವ ಬಾಬ್ತು ಗಿರಿಜ,ರಾಮಯ್ಯ ಆಳ್ವ,ರೂಪವತಿ ಅವರಿಂದ ಆಸ್ತಿ ಸ್ವಾಧೀನ ಪಡಿಸಿಕೊಂಡ ಬಗ್ಗೆ ಪರಿಹಾರ ನೀಡುವಂತೆ 2008ರಲ್ಲಿ ಅಂತಿಮ ಆದೇಶ ನೀಡಿರುತ್ತದೆ. ಆದರೆ ಆ ಬಗ್ಗೆ ಸಹಾಯಕ ಅಧಿಕಾರಿ ವಹಿಸಿದ ನಿರ್ಲಕ್ಷ್ಯದಿಂದಾಗಿ ನೊಂದ ಗಿರಿಜ ಅವರು ಮತ್ತೆ ನ್ಯಾಯಾಲಯದ ಮೆಟ್ಟಲೇರಿ ಅಮಲ್ಜಾರಿ ನಂಬ್ರ 32/15ನ್ನು ದಾಖಲಿಸಿ ಸಹಾಯಕ ಕಮೀಶನರರ ಮಂಗಳೂರು ಕಛೇರಿಯನ್ನು ಮುಡ್ರುಗೋಲು ಹಾಕಲು ಪ್ರಾರ್ಥಿಸಿ ಅಂತೆಯೇ ಆದೇಶ ಪಡೆದಿದ್ದರು.
ಇಂದು ನ್ಯಾಯಾಲಯದ ಅ„ಕಾರಿಗಳು ಎ.ಸಿ.ಕಛೇರಿ ಜಪ್ತಿಗೆ ಮುಂದಾದಾಗ, 3 ತಿಂಗಳ ಒಳಗೆ ಅರ್ಜಿದಾರರಿಗೆ ಸಲ್ಲಬೇಕಾದ ಮೊತ್ತವನ್ನು ಕೊಡುವುದಾಗಿ ಮುಚ್ಚಳಿಕೆ ಬರೆದು ಕೊಟ್ಟಿರುತ್ತಾರೆ. ಅರ್ಜಿದಾರ 25 ವರ್ಷಗಳ ಅಲೆತಕ್ಕೆ ಒಂದಿಷ್ಟು ಪರಿಹಾರ ದೊರಕಿದಂತಾಗಿದೆ. ಅರ್ಜಿದಾರರ ಪರವಾಗಿ ನ್ಯಾಯಾವಾದಿಗಳಾದ ಕೆ.ಕೃಷ್ಣ ಮೂರ್ತಿ,ಶಿವಪ್ರಕಾಶ್ ವಾದಿಸಿದ್ದರು.

