ಉಳ್ಳಾಲ: ಸುನ್ನಿ ಕೋ-ಓರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ ವತಿಯಿಂದ ಹುಬ್ಬುರ್ರಸೂಲ್ ಪ್ರಭಾಶಣ-2016 ಕಾರ್ಯಕ್ರಮ ಕೆ.ಸಿ.ರೋಡ್ ಜಂಕ್ಷನ್ ನಲ್ಲಿ ನಡೆಯಿತು. ಬಾದುಷಾ ಸಖಾಪಿ ಆಲಪ್ಪುಝ ಮಾತನಾಡಿ ಪ್ರವಾದಿವರ್ಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿ ನಡೆದರೆ ನಾವೆಲ್ಲರೂ ಇಹಪರಲೋಕದಲ್ಲಿ ವಿಜಯಿಗಳಾಗುತ್ತೇವೆ ಎಂದರು.
ಖಾಝಿ ಶೈಖುನಾ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಅವರು ಹುಬ್ಬುರ್ರಸೂಲ್ ಪ್ರಭಾಶಣ ಉದ್ಘಾಟಿಸಿದರು, ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಅಧ್ಯಕ್ಷತೆ ವಹಿಸಿದರು, ಸಯ್ಯದ್ ಶಿಹಾಬುದ್ದೀನ್ ಅಲ್-ಮಶೂಃರು,ತಲಕ್ಕಿ ಕೂಟು ಪ್ರಾರ್ಥನೆ ಮಾಡಿದರು.

ಯು.ಬಿ.ಮೊಹಮ್ಮದ್ ಹಾಜಿ ದ್ವಜಾರೋಹಣ ಗೈದರು, ಅಝೀಝ್ ಸಖಾಪಿ,ಇಬ್ರಾಹಿಂ ಫೈಝಿ,ಮುನೀರ್ ಸಖಾಪಿ,ಅಬ್ದುಲ್ ಲತೀಫ್ ಮದನಿ, ಹಾರೂನ್ ಅಹ್ಸನಿ,ಅಬ್ದುಲ್ ಅಝೀಝ್ ಸಖಾಫಿ, ಇಬ್ರಾಹಿಂ ಇರ್ಫಾನಿ, ಅಕ್ಬರ್ ಅಲಿ ಸಅದಿ, ಹನೀಫ್ ಸಖಾಫಿ, ಅಬ್ದುಲ್ ಬಾರಿ ಸಅದಿ,ಪಿ.ಐ.ಮೊಹಮ್ಮದ್ ಕುಂಞ ಹಾಜಿ,ಎ.ಎಂ ಅಬ್ಬಾಸ್ ಹಾಜಿ,ಅಬ್ಬಾಸ್ ಹಾಜಿ ಪೆರಿಬೈಲ್, ಕೆ.ಎಮ್ ಅಬ್ದುಲ್ಲ ಹಾಜಿ ಕೋಟೆಕಾರ್, ಎ.ಎಮಮೊೈದಿನ್ ಬಾವ, ಟಿ.ಕೆ.ಸಲೀಂ, ಅಬ್ಬಾಸ್, ಅಬ್ದುಲ್ ಖಾದರ್ ಹಾಜಿ, ಹಾಜಿ ಸುಲೈಮಾನ್, ಅಬ್ದುಲ್ ಅಝೀಝ್,ಎಸ್.ಬಿ.ಹನೀಫ್,ಟಿ.ಎಮ್.ಮೂಸ ಕುಂಞ,ಹಾಜಿ ಮೊಹಮ್ಮದ್,ಇಸ್ಹಾಕ್,ಅಬ್ದುಲ್ ಹಕೀಮ್,ನಝೀರ್,ಇಬ್ರಾಹಿಂ ಉಪಸ್ಥಿತರಿದ್ದರು. ಸುನ್ನಿ ಕೋ-ಓರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ ಸ್ವಾಗತ ಸಮಿತಿ ಸಂಯೋಜಕ ಅಬ್ದುಲ್ಲ ಮದನಿ ಸ್ವಾಗತಿಸಿದರು.

