ಕಂದಾವರ ಗ್ರಾ.ಪಂ.ನಲ್ಲಿ ಗ್ರಾಮಸಭೆ;
`ಪಂ. ಸಿಬ್ಬಂದಿಯನ್ನುಕೆಲಸದಿಂದ ತೆಗೆದ ಪರಿಣಾಮ ಪಿಡಿಓ ಅವರನ್ನು ಗ್ರಾಮಸ್ಥರು ತರಾಟೆಗೆತೆಗೆದು ಕೊಂಡರು.
ವಿಕ ಸುದ್ದಿಲೋಕ ಕೈಕಂಬ
ಕಂದಾವರ ಪಂಚಾಯತ್ನಲ್ಲಿ ಸೋಮವಾರ ಗ್ರಾಮ ಸಭೆ ಗೊಂದಲದ ಗೂಡಾಗಿದ್ದು ಪಂಚಾಯತ್ ಸಿಬ್ಬಂದಿ ಮಹಿಳೆಯೋರ್ವರನ್ನು ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ಕಿತ್ತು ಹಾಕಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯತ್ನವರನ್ನು ತರಾಟೆಗೆ ತೆಗೆದುಕೊಂಡರು.
ಕಂದಾವರ ಗ್ರಾಮದ ಪಡ್ಡಯಿ ಪದವು ನಿವಾಸಿ ಸುರೇಖ ಎಂಬವರು ಕಳೆದ ಒಂಬತ್ತು ವರ್ಷಗಳಿಂದ ಕಂದಾವರ ಪಂ.ನಲ್ಲಿ ಕಂಪ್ಯೂರ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಎರಡು ವರ್ಷದ ಮುಂಚೆ ಇವರು ಹೆರಿಗೆಗೆಂದು ಮೂರು ತಿಂಗಳು ರಜೆ ಹಾಕಿ ಮನೆಗೆ ತೆರಳಿದ್ದರು. ರಜೆ ಮುಗಿಸಿ
ಮರಳಿ ಕೆಲಸಕ್ಕೆ ಹಾಜರಾದಾಗ ಆದುದರಿಂದ ಕೆಲಸ ನಿರ್ವಹಿಸುವಂತಿಲ್ಲ, ಕೆಲಸ ರಾಜೀನಾಮೆ ನೀಡಬೇಕು ಎಂದು ಹೇಳಿದ್ದರು. ಇದರಿಂದಾಗಿ ಕಳೆದ ಒಂದು ವರ್ಷದಿಂದ ಸುರೇಖಾ ಇದ್ದ ಕೆಲಸವನ್ನೂ ಕಳೆದುಕೊಂಡು ಮನೆಯಲ್ಲೇ ಇರಬೇಕಾದ ಪ್ರಮೇಯ ಒದಗಿಬಂದಿತ್ತು.
ಯಾವುದೇ ಮುನ್ಸೂಚನೆ ಇರಲಿಲ್ಲ:
ಸುರೇಖಾ ರಜೆಯಲ್ಲಿದ್ದ ಸಂದರ್ಭದಲ್ಲಿ ಸುರೇಖಾರನ್ನ ಕೆಲಸದಿಂದ ವಜಾಗೊಳಿಸುವ ಬಗ್ಗೆ ನೋಟೀಸನ್ನಾಗಲೀ, ಮುನ್ಸೂಚನೆಯನ್ನಾಗಲೀ ನೀಡಿರಲಿಲ್ಲ ಎಂದು ಆರೋಪಿಸಲಾಗಿದೆ. ಈ ವಿಚಾರ ಅವರಿಗೆ ಮತ್ತೆ ಕರ್ತವ್ಯಕ್ಕೆ ಹಾಜರಾದಗಲೇ ತಿಳಿದಿತ್ತು.
ಕೆಲಸದಿಂದ ಕಿತ್ತದ್ದು ಯಾಕೆ?
ಪಂಚಾಯತ್ ಸಭೆಯಲ್ಲಿ ಆಕ್ರೋಶಿತರು ಸುರೇಖಾರನ್ನು ಕೆಲಸದಿಂದ ವಜಾಗೊಳಿಸಿದ್ದರ ಬಗ್ಗೆ ಸಕಾರಣವನ್ನು ನೀಡಬೇಕು ಎಂದು ಪಟ್ಟು ಹಿಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪಂ. ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ ಸರಕಾರದಿಂದ ಬಂದ ಸುತ್ತೋಲೆಯ ಪ್ರಕಾರ ಎಸ್ಎಸ್ಎಲ್ಸಿ ಆಗದೆ ಯಾರನ್ನಾಗಲೀ ಕೆಲಸಕ್ಕೆ ನಿಯೋಜಿಸುವಂತಿಲ್ಲ. ಇದೇ ಕಾರಣಕ್ಕೆ ಸುರೇಖಾರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು. ಇದರಿಂದ ಕೆರಳಿದ ಗ್ರಾಮಸ್ಥರು ಈ ಬಗ್ಗೆ ಯಾಕೆ ಸುರೇಖಾರಿಗೆ ಮೊದಲೇ ಪತ್ರ ಬರೆದು ತಿಳಿಸಲಿಲ್ಲ? ಸೌಜನ್ಯಕ್ಕಾದರೂ ಪತ್ರಿಸಬಹುದಿತ್ತು. ಇದರಿಂದಾಗಿ ಆಕೆ ಹೊಟ್ಟೆಗೆ ಕಲ್ಲು ಹಾಕಿದಂತಾಗಿದೆ. ನೀವು ಯಾವುದೇ ವೈಯಕ್ತಿಕ ಕಾರಣವನ್ನು ಇಟ್ಟು ಆಕೆಯನ್ನು ಕೆಲಸದಿಂದ ಕಿತ್ತು ಹಾಕಿದ್ದೀರಿ. ಕೆಲಸದಿಂದ ಕಿತ್ತು ಹಾಕಿರುವುದು ಎಲ್ಲವೂ ರಾಜಕೀಯ ಪ್ರೇರಿತ. ಪ್ರತಿಯೊಂದರಲ್ಲೂ ರಾಜಕೀಯ ಕೈಯಾಡಿಸುವುದಾದರೆ ಪಂಚಾಯತ್ ಇರುವುದಾದರೂ ಯಾಕೆ? ಆಕೆಯನ್ನು ಮತ್ತೆ ಕೆಲಸಕ್ಕೆ ನಿಯೋಜಿಸಿ ಎಂದು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಓ ರೋಹಿಣಿ ಗ್ರಾಮಸಭೆಯಲ್ಲಿ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಬೇಡಿ, ಬೇರೆ ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿದಾಗ ಗ್ರಾಮಸ್ಥರು ಸಿಬ್ಬಂದಿ ವಿಚಾರ ಗ್ರಾಮಸಭೆಯಲ್ಲೇ ಚಚರ್ೆಗೆ ಬರಲಿ ಎಂದು ಆಗ್ರಹಿಸಿದರು.
ನಂತರ ಗ್ರಾಮಸ್ಥರು ಈ ಬಗ್ಗೆ ಸುರೇಖಾ ತನ್ನನ್ನು ಮತ್ತೆ ಕೆಲಸಕ್ಕೆ ನಿಯೋಜಿಸಬೇಕು ಎಂದು ಮನವಿಯನ್ನೂ ಸಲ್ಲಿಸಿದ್ದಾರೆ, ಅಲ್ಲದೆ ಜಿಲ್ಲಾ ಪಂ. ಈ ಬಗ್ಗೆ ತಾ.ಪಂ.ಗೆ ಪತ್ರ ಬರೆದಿದ್ದಾರೆ. ಅಲ್ಲದೆ ತಾಲೂಕು ಪಂಚಾಯತ್ ಕಂದಾವರ ಪಂಚಾಯತ್ಗೆ ಪತ್ರವನ್ನು ಬರೆದಿದ್ದಾರೆಂಬ ವಿಚಾರ ನಮಗೆ ತಿಳಿದಿದೆ. ಆದರೆ ಕಂದಾವ ಪಂಚಾಯತ್ನವರು ಮಾತ್ರ ಈ ಬಗ್ಗೆ ಸುರೇಖಾರಿಗೆ ಯಾವುದೇ ಮಾಹಿತಿ ನೀಡದೆ ತನ್ನೊಳಗಡೆ ನಿರ್ಣಯ ತೆಗೆದುಕೊಂಡು ಕೆಲಸದಿಂದ ವಜಾಗೊಳಿಸಿದ್ದಾರೆ. ಇದು ಖಂಡಿತಾ ರಾಜಕೀಯ ಪ್ರೇರಿತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಾಲೂಕು ಮುಖ್ಯ ನಿರ್ವಹಣಾಧಿಕಾರಿ ಅವರನ್ನು ಮತ್ತೆ ಕೆಲಸಕ್ಕೆ ನಿಯೋಜಿಸುವಂತೆ ಹೇಳಿಕೊಂಡಿದ್ದರೂ ಆಕೆಯನ್ನು ಕೆಲಸಕ್ಕೆ ನಿಯೋಜಿಸದೆ ವಂಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿ ನಾಗರಾಜ, ಮೆಸ್ಕಾಂ ಅಧಿಕಾರಿ ಜಗದೀಶ್ ಮೂತರ್ಿ, ಆರೋಗ್ಯ ಅಧಿಕಾರಿ ನವೀನ್ ಚಂದ್ರ, ಇಂಜಿನಿಯರ್ ಕೃಷ್ಣ ಕುಮಾರ್, ಪಿಡಿಓ ರೋಹಿಣಿ, ಪಂ. ಅಧ್ಯಕ್ಷೆ ವಿಜಯ ಗೋಪಾಲ ಸುಣರ್ಾ, ಉಪಾಧ್ಯಕ್ಷೆ ವೀಣಾ ತೆರೆಸಾ, ತಾ.ಪಂ ಸದಸ್ಯೆ ಜಾನ್ಸನ್ ಲೋಬೋ, ತಾ. ಪಂ. ಸದಸ್ಯೆ ಸೆಲಿನ್ ಫೆನರ್ಾಡಿಸ್ , ಜಿ.ಪಂ ಸದಸ್ಯೆ ಯಶವಂತಿ ಆಳ್ವಾ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.27 vp kandavara grama sabe


 



1


27vp kandavara 1

By suddi9

Leave a Reply

Your email address will not be published. Required fields are marked *