ಮುಂಬಯಿ: ಮಠ, ಮಠಾಧಿಪತಿಗಳ ಮೂಲಕ ಸಾಮಾಜಿಕ ಏಕತೆ, ಧಾರ್ಮಿಕ ಪ್ರಜ್ಞೆಗಳ ಅರಿವು ಭಕ್ತರಿಗೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಪಾರಂಪರಿಕ ಕ್ರಮಗಳ ಅನೂಚವಾದ ಅನುಸರಣೆಯೊಂದಿಗೆ ಸಾಂಸ್ಕೃತಿಕವಾಗಿಯೂ, ಧಾರ್ಮಿಕವಾಗಿಯೂ ಎಡನೀರು ಮಠ ತನ್ನದೇ ಕೊಡುಗೆ ನೀಡುವುದರ ಮೂಲಕ ಗುರುತಿಸಿಕೊಂಡಿದೆಯೆಂದು ಶೃಂಗೇರಿ ಶ್ರೀಮಠದ ಆಡಳಿತಾಧಿಕಾರಿ ವಿ.ಆರ್ ಗೌರೀಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

badiyadka-2

ಶ್ರೀಎಡನೀರು ಮಠದ ಹಿಂದಿನ ಮಠಾಧೀಶರಾದ ಈಶ್ವರಾನಂದ ಭಾರತೀ ಶ್ರೀಪಾದಂಗಳ ಆರಾಧನೋತ್ಸವದ ಅಂಗವಾಗಿ ನಡೆದ ಅಭಿನಂದನೆ ಮತ್ತು ವವಿಧ ಕಾರ್ಯಕ್ರಮಗಳನ್ನು ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಳ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಧಾರ್ಮಿಕ ಶ್ರದ್ದೆ ಹಾಗೂ ನಂಬಿಕೆಗಳನ್ನು ಜನಸಾಮಾನ್ಯರಿಗೆ ತಿಳಿಯಪಡಿಸುವುದ ಜೊತೆಗೆ ಧಾರ್ಮಿಕತೆಯ ಸವಾಲುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವಲ್ಲಿ ಮಠಗಳು ಪ್ರಧಾನ ಪಾತ್ರ ವಹಿಸುತ್ತವೆ.ಧರ್ಮ ಮತ್ತು ಜೀವನ ಕ್ರಮಗಳ ಮಧ್ಯದ ಗೊಂದಲಗಳಿಗೆ ಶ್ರೀಮಠಗಳ ಮೂಲಕ ನೈಜ ಅರ್ಥಗಳನ್ನು ಕಂಡುಕೊಳ್ಳಲಾಗುತ್ತಿದ್ದು ಶ್ರೀಎಡನೀರು ಮಠ ಕಲೆ,ಸಂಸ್ಕೃತಿಗಳ ಪ್ರೋತ್ಸಾಹಗಳಿಗೆ ಮಾದರಿಯಾಗಿ ಮಾರ್ಗದರ್ಶಕವಾಗಿದೆಯೆಂದು ತಿಳಿಸಿದರು.

badiyadka

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಂ ಭಟ್ ಅಧ್ಯಕ್ಷತೆ ವಹಿಸಿದ್ದರು.ಉದುಮ ಶಾಸಕ ಕುಂಞ ರಾಮನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮಾ ಹಾಗೂ ಕೊಯಂಬುತ್ತೂರು ಆರ್ಯವೈದ್ಯಶಾಲೆಯ ನಿರ್ದೇಶಕ ಡಾ| ಕೆ.ಜಿ ರವೀಂದ್ರನ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು. ಎಂ.ಎಲ್ ಸಾಮಗ ಹಾಗೂ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣ ಗೈದರು.

ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಗುರುವಂದನೆ ಸಲ್ಲಿಸಿದರು. ಮಠದ ಕಾರ್ಯನಿರ್ವಹಣಾಧಿಕಾರಿ ಜಯರಾಮ ಮಂಜತ್ತಾಯ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಐ.ವಿ ಭಟ್ ಸ್ವಾಗತಿಸಿ, ರಾಜೇಂದ್ರ ಕಲ್ಲೂರಾಯ ವಂದಿಸಿದರು. ಬಳಿಕ ಬೆಂಗಳೂರಿನ ಎಂ.ಎಸ್ ಪ್ರಸಾದ್ ಮತ್ತು ತಂಡವು ಮ್ಯೇಂಡಲಿನ್ ನಿನಾದ ಪ್ರಸ್ತುತಗೊಂಡಿತು.

By suddi9

Leave a Reply

Your email address will not be published. Required fields are marked *