ಸಿದ್ಧಕಟ್ಟೆ :ಬಂಟ್ವಾಳ ತಾಲೂಕು ಸ.ಪ್ರ.ದ ಕಾಲೇಜುನಲ್ಲಿ ಪದವಿ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಭಾಷಾ ಸಂವಹನ ಕೌಶಲ್ಯವನ್ನು ವೃದ್ಧಿಸುವ ಉದ್ದೇಶದಿಂದ 30 ಗಂಟೆಗಳ ಕಮ್ಯುನಿಕೇಟಿವ್ ಇಂಗ್ಲೀಷ್ ಸರ್ಟಿಫೆಕೇಟ್ ಕೋರ್ಸ್ ನ   ಉದ್ಘಾಟನೆಯು  ಸಿದ್ಧಕಟ್ಟೆ  ಸ.ಪ್ರ.ದ.ಕಾಲೇಜಿನಲ್ಲಿ ಜರಗಿತು.

4
ಸಂಪನ್ಮೂಲ ವ್ಯಕ್ತಿ ಸ್ಟಾನ್ಲಿ ರೆಬೆಲ್ಲೋ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲ ಪ್ರೊ| ಸತ್ಯನಾರಾಯಣ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ  ಇಂದಿನ ಸಮಾಜದಲ್ಲಿ ಇಂಗ್ಲೀಷ್ ಭಾಷಾ ಸಂವಹನ ಕೌಶಲ್ಯವು ಮಹತ್ವವನ್ನು ಪಡೆದುಕೊಂಡಿದ್ದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಭಾಷಾ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮ ಸಂಯೋಜಕಿ, ಪ್ರಾಧ್ಯಾಪಕಿ ನಸೀಮಾ ಬೇಗಂ ಅವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *