ಬಂಟ್ವಾಳ : ತಾಲೂಕು ಸಿದ್ಧಕಟ್ಟೆ ಭಗವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿವನಗರ ಮಾವಿನಕಟ್ಟೆ ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆಯ ಹಾಲಿನ ವಿತರಣೆಗಾಗಿ ಸ್ಟೀಲ್ ಲೋಟವನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಟ್ರಸ್ಟ್ನ ಅಧ್ಯಕ್ಷ ಪ್ರಶಾಂತ್ ಹೆಣ್ಣೂರುಪದವು ಅವರು ಮುಖ್ಯ ಶಿಕ್ಷಕಿ ಅವರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ನ ಸದಸ್ಯರಾದ ಜಯಂತ್ ಪ್ರತಿಬಿಂಬ, ಕರುಣಾ ಮಂಚಕಲ್ಲು , ಸತೀಶ್ ಪೂಜಾರಿ, ಪ್ರಭಾಕರ ಪ್ರಭು ಹಾಗೂ ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.

