ಮೂಡುಬಿದಿರೆ: ಸುಳ್ಯ ತಾಲೂಕಿನ ಪಂಜ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಆಳ್ವಾಸ್ ಪ್ರೌಢಶಾಲೆಯ ಕ್ರೀಡಾಪಟುಗಳು 30 ಚಿನ್ನ, 20 ಬೆಳ್ಳಿ ಹಾಗೂ 10 ಕಂಚಿನ ಪದಕಗಳನ್ನು ಪಡೆದು ಒಟ್ಟು 60 ಪದಕಗಳನ್ನು ತಮ್ಮದಾಗಿಸಿಕೊಂಡಿರುತ್ತದೆ. 17 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ತಂಡ ಪ್ರಶಸ್ತಿಯೊಂದಿಗೆ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.
12 ಕೂಟ ದಾಖಲೆ: 17 ವರ್ಷ ವಯೋಮಿತಿಯಲ್ಲಿ ನಾಗೇಂದ್ರ ಅಣ್ಣಪ್ಪ ಗುಂಡು ಎಸೆತದಲ್ಲಿ 14.04 ಮೀ. ( ಹಳೇ ದಾಖಲೆ 14.03), ಚಕ್ರ ಎಸೆತದಲ್ಲಿ 46.40 ಮೀ. ( ಹಳೇ ದಾಖಲೆ 40.45 ಮೀ. ), ಮಾಂತೇಶ ಸಿದ್ದಪ್ಪ 200 ಮೀ. ನಲ್ಲಿ 23.3 ಸೆ. ( ಹಳೇ ದಾಖಲೆ 23.40 ಸೆ.), ಅನಿತಾ ವಿ.ಎಸ್ ತ್ರಿವಿಧ ಜಿಗಿತದಲ್ಲಿ 10.95 ಮೀ.( ಹಳೇ ದಾಖಲೆ 10.87 ಮೀ.), ಸೃಷ್ಠಿ ಉಳವಪ್ಪ ಕಲಿವಾಳ ಚಕ್ರ ಎಸೆತದಲ್ಲಿ 34.68 ಮೀ.( ಹಳೇ ದಾಖಲೆ 34.34 ಮೀ.), ಜೋತ್ಸ್ನಾ 200 ಮೀ. ನಲ್ಲಿ 26.1 ಸೆ. ( ಹಳೇ ದಾಖಲೆ 26.37 ಸೆ.), ವಿ.ಎಸ್ ಶ್ರೀದೇವಿಕಾ 100 ಮೀಟರ್ ಹಡಲ್ಸ್ ನಲ್ಲಿ 15.5 ಸೆ. ( ಹಳೇ ದಾಖಲೆ 15.08 ಸೆ.)
14 ವರ್ಷದ ವಯೋಮಿತಿಯಲ್ಲಿ ಕೀರ್ತಿ ಹೆಚ್.ಟಿ ಎತ್ತರ ಜಿಗಿತದಲ್ಲಿ 1.44 ಮೀ.( ಹಳೇ ದಾಖಲೆ 1.38 ಮೀ.),14 ವರ್ಷದ ಪ್ರಾಥಮಿಕ ವಿಭಾಗದಲ್ಲಿ ರಾಜ ಸೋಪನ ದತ್ತ 200 ಮೀಟರ್ ನಲ್ಲಿ 26.50 ಸೆ. ( ಹಳೇ ದಾಖಲೆ 26.60 ಸೆ.) , 400 ಮೀ. ನಲ್ಲಿ 57.80 ಸೆ. (ಹಳೇ ದಾಖಲೆ 59.10 ಸೆ.) ಶ್ರೀನಿವಾಸ ಚಕ್ರ ಎಸೆತದಲ್ಲಿ 35.28 ಮೀ. ( ಹಳೇ ದಾಖಲೆ 31.19 ಮೀ.)
14 ವರ್ಷದ ಪ್ರಾಥಮಿಕ ವಿಭಾಗದಲ್ಲಿ ರಾಜ ಸೋಪನ ದತ್ತ, 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ – ಮಾಂತೇಶ ಸಿದ್ದಪ್ಪ ಹೆಳವಿ ಹಾಗೂ ಬಾಲಕಿಯರ ವಿಭಾಗದಲ್ಲಿ ಮಾಲಾಶ್ರೀ ಮುದಕಪ್ಪ ವೈಯಕ್ತಿಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

