ಮೂಡುಬಿದಿರೆ: ಉರ್ಪೆಲ್‍ಪಾದೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಲಯನ್ಸ್ ಕ್ಲಬ್‍ನ ಅಧ್ಯಕ್ಷ, ದಾನಿ ರುಕ್ಕಯ್ಯ ಪೂಜಾರಿ ಅವರು ಪುಟಾಣಿಗಳಿಗೆ ಸಮವಸ್ತ್ರವನ್ನು ಬುಧವಾರ ವಿತರಿಸಿದರು.
ಮೂಡಾ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಸದಸ್ಯೆ, ಸಮನ್ವಯ ಸಮಿತಿಯ ಸದಸ್ಯೆ ಎಲಿಜಾ ಮಿನೇಜಸ್, ಉದ್ಯಮಿ ಕೆ.ಶ್ರೀಪತಿ ಭಟ್, ಲಯನ್ಸ್ ಮಾಜಿ ಅಧ್ಯಕ್ಷ ಆಲ್ವೀನ್ ಮಿನೇಜಸ್, ಶಿರ್ತಾಡಿ ಗ್ರಾ.ಪಂ ಅಧ್ಯಕ್ಷೆ ಲತಾ ಹೆಗ್ಡೆ, ಅಂಗನವಾಡಿ ಮೇಲ್ವೀಚಾರಕಿ ನಾಗರತ್ನ, ಕಲ್ಲಬೆಟ್ಟು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಆಲಿದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಸ್ವಾಗತಿಸಿದರು. ಸುನಿಲ್ ಶೆಟ್ಟಿ ಮಾರೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹಾಯಕಿ ಹರಿಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

