ಕಂಬನಿಗಳು ಕಣ್ಣನ್ನು ಸುತ್ತುವರಿಯುತ್ತಿದೆ
ಬಡಿತಗಳು ಹೃದಯವನ್ನು ಬಡಿಯುತ್ತಿದೆ
ಕನಸುಗಳು ಮನಸ್ಸಲ್ಲೆ ಕೊರಗುತ್ತಿದೆ
ಭಾವನೆಗಳು ಭಾವಗಳನ್ನು ಬಂಧಿಸುತ್ತಿದೆ
ದೀಪಗಳು ಗಾಳಿ ಇಲ್ಲದೆನೇ ನಂದಿ ಹೋಗುತ್ತಿದೆ
ಪ್ರೀತಿಗಳು ಬೆಂಕಿ ಇಲ್ಲದೆನೆ ಸುಟ್ಟು ಹೋಗುತ್ತಿದೆ
ಕಾರಣಗಳು ಕಾಣದಂತೆ ಕಾಣೆಯಾಗುತ್ತಿದೆ
ಮೌನಗಳು ಮಾತನ್ನು ಮರೆಸುತ್ತಿದೆ
ನೆನಪುಗಳು ನಿನ್ನನ್ನು ನೆನೆಯುತ್ತಿದೆ
ನೆಪಗಳು ನನ್ನನ್ನು ಕಾಡುತ್ತಿದೆ
ನೀ ನಿಲ್ಲದೆ ನನ್ಮ ಜೀವ ಸಾಯುತ್ತಿದೆ
ನೀ ಬಂದರೆ ನನ್ನ ಜೀವ ಉಳಿಯುತ್ತದೆ
ಸಂದೀಪ್ ಆಚಾರ್ಯ ಸೊರ್ಣಾಡು


