mfxjfyc

ಬರೆಯುವುದ ನಿಲ್ಲಿಸಿ
ಧೀರ್ಘವಿರಾಮ ನೀಡಿದಾಗ
ಪದಗಳು ಮುತ್ತುತ್ತವೆ
ಮನಸಿನಾಳಕೆ..
ಬರೆಯುವುದೆಲ್ಲವೂ ಒಗಟೆ ನನ್ನದು
ಮರದ ತೊಗಟೆಗೂ ಕೇಳಿಸುವುದು..
ಸಣ್ಣ ಧ್ವನಿಯ ಗುಬ್ಬಿ
ಕೊಚ್ಚೆಯ ನಾಯಿ
ಅವಳ ಮೂಗುತಿ
ನಿಶ್ಚಿಂತೆಯ ಮುದುಕ
ಸತ್ತ ಹೆಣ..
ಎಲ್ಲವೂ ಸಂಸಾರಗಳು
ನನ್ನ ಪುಟದಲಿ…..
ಬರೆಯದಿರುವುದು
ಅನಂತ‍, ಅತೀತ
ಮನಸುಗಳ ಸಣ್ಣ ವೇದನೆಗೆ
ಲೇಖನಿ ಹೊರಳುತ್ತಿವೆ
ಬಿಳಿಹಾಳೆಯ ಕಡೆಗೆ……

1

ಮಾಳ ಸುಜಿತ್ ಶೆಟ್ಟಿ (ಮನಸ್ಪತಿ)

By suddi9

Leave a Reply

Your email address will not be published. Required fields are marked *