ಅಬ್ಬರಿಸು ಕಡಲೇ,ಇನ್ನೂ ಚೂರು
ಮತೆಗೇಡಿಗಳ ಮನಕೆ ಮುಟ್ಟಿಸು ನಿನ್ನ ಧ್ವನಿಯ…
ಕಾಲೆಳೆಯುವವರಿಗೆ ತಿಳಿಸು ನಿನ್ನ ನಡೆಯ
ಶಾಂತಸಾಗರವಾಗಬೇಡ ನೀ ಅಶಾಂತವಾಗು
ಹೊತ್ತೊಯ್ಯಿ ಕಷ್ಟ-ಕಾರ್ಪಣ್ಯಗಳ,
ಒಡಲೊಳಗೆ ತುಂಬಿಕೊ ದ್ವೇಷ ಅಸೂಯೆಯ…
ಅಲೆಯ ಅಬ್ಬರಕೆ ಮಾರು ಹೋಗಿರುವೆ ನಾನು
ನನ್ನನ್ನು ಸೇರಿಸು ನಿನ್ನ ಕುಟುಂಬಕ್ಕೆ…
ನಿನ್ನ ಪುಣ್ಯದಲಿ ನನಗೊಂದು ಪಾಲು ಕಾಯ್ದಿರಿಸು…
ಮಾಳ ಸುಜಿತ್ ಶೆಟ್ಟಿ


