ಬಂಟ್ವಾಳ: ರಾ.ಸೇ.ಯೋಜನೆಯು ರಾಷ್ಟ್ರದ ಏಕತೆ, ಸಾಮರಸ್ಯ ಮತ್ತು ಸೌಹಾರ್ದತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಕಾರಿಯಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಮಾನಾಥ ರೈ ಅವರು ಹೇಳಿದರು.

nss

ಅವರು ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸ.ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯಿಂದ ಹೆನ್ನೂರು ಪದವು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಅ.8ರಂದು 2016-17 ಸಾಲಿನ ವಿಶೇಷ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಪದ್ಮನಾಭ ರೈ ಎನ್.ಅವರು ಅದ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ದಿಗೆ ಎನ್ನೆಸ್ಸೆಸ್ ಪೂರಕವಾಗಿದ್ದು ಶಿಬಿರದಲ್ಲಿ ದೊರಕುವ ಅನುಭವಗಳು ಜೀವನದಲ್ಲಿ ಪಾಠವಾಗಲಿದೆ ಎಂದು ಹೇಳಿದರು.ಸಂಗಬೆಟ್ಟು ಕ್ಷೇತ್ರದ ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷ ದಿನೇಶ ಸುಂದರ ಶಾಂತಿ, ನ್ಯಾಯವಾದಿ ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಬಿ.ಎಚ್. ಖಾದರ್ ಅವರು ಶಿಬಿರಕ್ಕೆ ಶುಭ ಹಾರೈಸಿದರು. ಕುಕ್ಕಿಪಾಡಿ ಗ್ರಾ.ಪಂ. ಉಪಾಧ್ಯಕ್ಷೆ ವಿನಯ ಡಿ. ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಘು ಪೂಜಾರಿ, ಬಂಟ್ವಾಳ ಅಕ್ರಮ ಸಕ್ರಮ ಸಮಿತಿ ಸದಸ್ಯಲೋಕಯ್ಯ ಗಾಡಿಪಲ್ಕೆ, ಪ್ರಮುಖರಾದ ರಾಮಣ್ಣ ಕಾಸರಗೋಡು, ವಸಂತ ಶಾಂತಿ, ದಿನೇಶ್ ಶೆಟ್ಟಿಗಾರ್ ಹಾಗೂ ಅಣ್ಣಿ ಪೂಜಾರಿ ಉಪಸ್ಥಿತರಿದ್ದರು.

ಉಪನ್ಯಾಸಕ ಶ್ರೀನಿವಾಸ ನಾಯ್ಕ ಸ್ವಾಗತಿಸಿದರು.ಯೋಜನಾಧಿಕಾರಿ ಶೀನಪ್ಪ ಎನ್.ಪ್ರಸ್ತಾವನೆಗೈದರು. ನಾಗರಾಜ ಬಿ. ವಂದಿಸಿದರು. ಸಂಜಯ್ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *