ಬಂಟ್ವಾಳ: ಶ್ರೀ. ಕ್ಷೇ. ಧ. ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಗ್ಗ ವಲಯ, ಪಿಲಾತಬೆಟ್ಟು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ನವಜೀವನ ಸಮಿತಿ, ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ಮುರುಘೇಂದ್ರ ವನಿತಾ ಸಮಾಜ ಇದರ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಅ.9 ರವಿವಾರ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಿತು.

punjalakatte

ಕಾವಳಮಾಗಣೆ ತಂತ್ರಿ ಗಣಪತಿ ಮುಚ್ಚಿನಾಯ ಅವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಮಾಣಿಕ್ಯರಾಜ್ ಜೈನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಡಾ|ಡಿ.ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯಿಂದ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸ್ವ-ಸಹಾಯ ಗುಂಪುಗಳಿಂದ ಹಲವಾರು ಬಡ ಕುಟುಂಬಗಳು ಸ್ವಾವಲಂಬಿ ಜೀವನವನ್ನು ನಡೆಸುವಂತಾಗಿದೆ ಎಂದು ಹೇಳಿದರು.

ರಾಜ್ಯ ಸಂಸ್ಕಾರಭಾರತಿ ಲೋಕಕಲಾ ವಿಭಾಗ ಪ್ರಮುಖ್ ತುಳುವಬೊಳ್ಳಿ ದಯಾನಂದ ಜಿ.ಕತ್ತಲ್‍ಸಾರ್ ಅವರು ಧಾರ್ಮಿಕ ಉಪನ್ಯಾಸದಲ್ಲಿ ಮಾತನಾಡಿ ಮಕ್ಕಳಿಗೆ ತಂದೆ ತಾಯಿಯಂದಿರು ಉತ್ತಮವಾದ ಶಿಕ್ಷಣ ನೀಡಿ ತನ್ನ ಮನೆಯಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಜೀವನವನ್ನು ನೀಡಬೇಕು.ಮಕ್ಕಳು ಯಾವುದೇ ರೀತಿಯ ದುರಭ್ಯಾಸ ಚಟಗಳಿಗೆ ಬೀಳದಂತೆ ಹೆತ್ತವರು ಜಾಗೃತರಾಗಬೇಕು .ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡಿ ದೇಶದ ಒಬ್ಬ ಉತ್ತಮ ಪ್ರಜೆಯಾಗುವಂತೆ ರೂಪಿಸಬೇಕು.ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಜಾತಿಮತ ಬೇಧವಿಲ್ಲದೆ ನಡೆಸುವುದು ಉತ್ತಮ ಕಾರ್ಯವಾಗಿದ್ದು ದೇವರ ಅನುಗ್ರಹ ದೊರೆಯುತ್ತದೆ ಎಂದು ಹೇಳಿದರು.

ಜಿ.ಪಂ.ಸದಸ್ಯರಾದ ಎಂ.ತುಂಗಪ್ಪ ಬಂಗೇರ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ಪಿಲಾತಬೆಟ್ಟು ಸೇ.ಸ.ಸಂಘದ ಮೇನೇಜರ್ ಮಂಜಪ್ಪ ಮೂಲ್ಯ, ವಗ್ಗ ವಲಯ ಪ್ರ.ಬ.ಸ್ವ-ಸಹಾಯ ಸಂಘ ಒಕ್ಕೂಟ ಅಧ್ಯಕ್ಷ ಮತ್ತು ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಮೋಹನ್ ಸಾಲ್ಯಾನ್ ಅವರು ಉಪಸ್ಥಿತರಿದ್ದರು.

ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಗ್ಗ ವಲಯ, ಮೇಲ್ವಿಚಾರಕರು,ಸೇವಾ ಪ್ರತಿನಿಧಿಗಳು, ಪಿಲಾತಬೆಟ್ಟು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ನವಜೀವನ ಸಮಿತಿ, ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ಮುರುಘೇಂದ್ರ ವನಿತಾ ಸಮಾಜ ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಿಲಾತಬೆಟ್ಟು ವಲಯ ಸೇವಾಪ್ರತಿನಿ„ ಅಮೃತಾ ಎಸ್.ಅವರನ್ನು ಧಾರ್ಮಿಕ,ಸಾಮಾಜಿಕ ಸೇವೆಗಾಗಿ ಸನ್ಮಾನಿಸಲಾಯಿತು. ನವಜೀವನ ಸಮಿತಿಯ ಸದಸ್ಯರಾದ ಮಣಿಕಂಠ ಮತ್ತು ನಾರಾಯಣ ಪೂಜಾರಿ ಹಾಗೂ ಉತ್ತಮ ಸಾಧನೆ ಮಾಡಿದ ಮಂಜುನಾಥ ಸ್ವ-ಸಹಾಯ ಸಂಘವನ್ನು ಅಭಿನಂದಿಸಲಾಯಿತು. ವಗ್ಗ ವಲಯ ಮೇಲ್ವಿಚಾರಕಿ ಭವಾನಿ ಅವರು ಸ್ವಾಗತಿಸಿದರು.ಪಿಲಾತಬೆಟ್ಟು ಸೇವಾ ಪ್ರತಿನಿಧಿ ಅಮೃತಾ ಎಸ್.ಅವರು ವಂದಿಸಿದರ . ಕೆ.ವಿ.ರಾಜೇಂದ್ರ ಅವರು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *