ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ಪದವಿ ಪೂರ್ವ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ ರಾಷ್ಟ್ರೀಯ ಸಂಸ್ಕಾರ ಶಿಬಿರ ‘ಉತ್ಥಾನ’ದ ಉದ್ಘಾಟನಾ ಸಮಾರಂಭವು ಅ.10 ಸೋಮವಾರ ಇಳಿಹೊತ್ತು 7 ಗಂಟೆಗೆ ‘ಸಾಧನಾ ಮಂಟಪ’ದಲ್ಲಿ ನೆರವೇರಿತು.
ಡಾ|ಅನುರಾಧ ಕೆ, ಬೆಸೆಂಟ್ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಶಿಬಿರವನ್ನು ಉದ್ಘಾಟಿಸಿ ವ್ಯಕ್ತಿತ್ವ ವಿಕಸನದಲ್ಲಿ ಮನೋಭಾವ ಮತ್ತು ಶಿಸ್ತಿನ ಅಗತ್ಯತೆ ಹಾಗೂ ಉತ್ತಮ ಸಮಾಜದ ನಿರ್ಮಾಣದಲ್ಲಿ ಹೆಣ್ಣುಮಕ್ಕಳ ಪಾತ್ರದ ಅರಿವಿನ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|ಪ್ರಭಾಕರ್ ಭಟ್ ಕಲ್ಲಡ್ಕ ಇವರು ಶಾರೀರಿಕ, ಮಾನಸಿಕ, ಆಚಾರ, ಸಂಸ್ಕಾರದ ಅಗತ್ಯತೆಗಳು ಹಾಗೂ ಸನಾತನ ಹಿಂದೂಧರ್ಮದ ಪುನರುತ್ಥಾನದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ನುಡಿದರು.
ಕಾರ್ಯಕ್ರಮದಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ಶ್ರೀ ವಸಂತ ಮಾಧವ, ಶಿಬಿರಾಧಿಕಾರಿಗಳಾದ ಡಾ|ಕಮಲಾ ಪ್ರಭಾಕರ್ ಭಟ್, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ|ಪಿ.ಯಸ್.ಯಡಪಡಿತ್ತಾಯ, ಪದವಿ ಪ್ರಾಚಾರ್ಯರಾದ ಕೃಷ್ಣಪ್ರಸಾದ್, ಪದವಿ ಪೂರ್ವ ಪ್ರಾಚಾರ್ಯರಾದ ವಸಂತ ಬಲ್ಲಾಳ್, ಪ್ರಾಥಮಿಕ ಮುಖ್ಯೋಪಾಧ್ಯಾಯರಾದ ರವಿರಾಜ ಕಣಂತೂರ್, ಶಿಶುಮಂದಿರ ಪ್ರಮುಖರಾದ ಗಂಗಾ ಮಾತಾಜಿ ಉಪಸ್ಥಿತರಿದ್ದು, ಶಿಬಿರ ಕಾರ್ಯವಾಹಿಕೆ ಶ್ರೀಮತಿ ಶೋಭಾ ವಿ ಶೆಟ್ಟಿ ಸ್ವಾಗತಿಸಿ ಶ್ರೀಮತಿ ಶೋಭಾ ಧನ್ಯವಾದಗಳನ್ನು ಸಮರ್ಪಿಸಿದರು. ಕುಮಾರಿ ರಮ್ಯಾ ಕಾರ್ಯಕ್ರಮ ನಿರೂಪಿಸಿದರು.

