ಕೈಕಂಬ: ಉಳಾಯಿಬೆಟ್ಟು ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ- 2016ರ ಸವಿನೆನಪಿಗಾಗಿ ನಿರ್ಮಾಣವಾಗಿರುವ ನೂತನ ಪ್ರಯಾಣಿಕರ ತಂಗುದಾಣದ ಕಟ್ಟಡ ಉದ್ಘಾಟನೆಯನ್ನು ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.

bjp-110ct-tangudana-udgante1

ಸಾಲೆಮನೆ ದಿ| ಅಕ್ಕಮ್ಮ ವೆಂಕಪ್ಪ ಭಂಡಾರಿಯವರ ಕೊಡುಗೆಯಾಗಿ, ಲಯನ್ಸ್ ಕ್ಲಬ್ ಕಾವೂರು ಇದರ ಸಹಕಾರದೊಂದಿಗೆ ನಿರ್ಮಾಣವಾಗಿರುವ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ದೇವಸ್ಥಾನದ ಬ್ರಹ್ಮಕಲಶೋತ್ಸವದ ಸವಿನೆನಪಿಗಾಗಿ ಊರಿನ ಜನರಿಗೆ ಅನುಕೂಲವಾಗುವಂತೆ ಬಸ್ಸು ತಂಗುದಾಣವನ್ನು ನಿರ್ಮಿಸಿರುವುದು ನಿಜವಾಗಿ ಶ್ಲಾಘನೀಯ ಹಾಗೂ ಆದರ್ಶವಾಗಿದೆ ಹಾಗೂ ಇಂತಹ ಯೋಜನೆಯನ್ನು ಉದ್ಘಾಟನೆ ಮಾಡಿರುವುದಕ್ಕೆ ಸಂತಸವಾಗಿದೆ ಇದಕ್ಕಾಗಿ, ಸಾಲೆ ದೇವಸ್ಥಾನದ ಆಡಳಿತ ಸಮಿತಿ, ಲಯನ್ಸ್ ಕ್ಲಬ್ ಕಾವೂರು ಹಾಗೂ ಊರಿನ ಜನತೆಯನ್ನು ಅಭಿನಂದಿಸುವುದಾಗಿ ತಿಳಿಸಿದರು.

bjp-11oct-tangudana-udagatane2

ಈ ಸಂದರ್ಭದಲ್ಲಿ ಮಂಗಳೂರು ಗ್ರಾಮಾಂತರ ಠಾಣೆ ಪೋಲಿಸ್ ಇನ್‍ಸ್ಪೆಕ್ಟರ್ ಮಹಮ್ಮದ್ ಶರೀಫ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತ್ ಕುಮಾರ್, ಉಪಾಧ್ಯಕ್ಷರಾದ ಸೌಮ್ಯ ಪಂಡಿತ್, ಮಾಜಿ ತಾಲೂಕು ಪಂಚಾಯತ್ ಸ್ಥಾನೀಯ ಸಮಿತಿ ಅಧ್ಯಕ್ಷರಾದ ಯೂಸುಫ್, ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್, ಕಮಲಾಕ್ಷ, ವಿಶ್ವನಾಥ ಶೆಟ್ಟಿ, ಗೋಪಿನಾಥ ರೈ ರಾಯಿ ಮೊಕ್ತೇಸರಾದ ನಿರಂಜನ್ ಶೆಟ್ಟಿ, ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಲಯನ್ಸ್ ಅರುಣ್ ಶೆಟ್ಟಿ, ಲಯನ್ಸ್ ಕ್ಲಬ್ ಕಾವೂರು ಇದರ ಅಧ್ಯಕ್ಷರಾದ ಮೋಹನ್‍ದಾಸ್ ಕಿಲ್ಲೆ, ಮಂಜುನಾಥ ಭಂಡಾರಿ ಶೆಡ್ಡೆ, ಶ್ರೀನಿವಾಸ ಮಾಣಾೈ ಹಾಗೂ ಭಜನಾಸಮಿತಿ ಸದಸ್ಯರು ಉಪಸ್ಥಿತರಿದ್ದರು. ರಾಜೀವ್ ಶೆಟ್ಟಿ, ಪ್ರಸ್ತಾಪನೆ ಮಾಡಿ ಸ್ವಾಗತಿಸಿದರು, ದಯಾನಂದ ಶೆಟ್ಟಿ ಕಡಂಬಿಲ ವಂದಿಸಿದರು.

By Suddi9

Leave a Reply

Your email address will not be published. Required fields are marked *