ಪರಂಗಿಪೇಟೆ:ಸಹೋದರ ಸೇವಾ ಸಂಘ(ರಿ)ಪರಂಗಿಪೇಟೆ ಮತ್ತು ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ಸಮಿತಿ ವತಿಯಿಂದ 27ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವು ಅ.8 ಶನಿವಾರದಿಂದ ಅ.11 ಮಂಗಳವಾರದವರೆಗೆ ಅರ್ಕುಳ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ, ವಠಾರದಲ್ಲಿ ವಿಶೇಷ ಧಾರ್ಮಿಕ ವೈದಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.



