ಬಂಟ್ವಾಳ: ನವದುರ್ಗೆಯರ ಆರಾಧನೆಯ ವಿಜಯದಶಮಿಯ ದಿನದಂದು ಚಂಡಿಕಾ ಪರಮೇಶ್ವರೀ ದೇವಿ ದೇವಸ್ಥಾನ ಬಿಸಿರೋಡ್ ಇಲ್ಲಿ ತೆನೆ ಪೂಜೆ ಬಳಿಕ ತೆನೆ ಸಾರ್ವಜನಿಕರಿಗೆ ವಿತರಣೆ ನಡೆಯಿತು.

1

2

3

ಮನುಷ್ಯನ ಜೀವನ ಆರೋಗ್ಯಭರಿತವಾಗಿ ಇರಬೇಕು ಎನ್ನುವ ಉದ್ದೇಶದಿಂದ ಧಾನ್ಯ ಲಕ್ಷೀಯ ಅನುಗ್ರಹಕ್ಕಾಗಿ ನವರಾತ್ರಿಯಲ್ಲಿ ತೆನೆ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿ ತೆನೆ ಪೂಜೆ ನಡೆದ ಬಳಿಕ ಭಕ್ತಾಧಿಗಳು ತೆನೆಯನ್ನು ದೇವರ ಕೋಣೆಯಲ್ಲಿ ಅಥವಾ ಮನೆಯಲ್ಲಿಡುವ ಸಂಪ್ರದಾಯ. ಇಂದು ಬೆಳಿಗ್ಗೆ ಭತ್ತಕ್ಕೆ ಗದ್ದೆಯಲ್ಲಿ ವಿಶೇಷ ಪೂಜೆ ಮಾಡಿ ಬಳಿಕ ದೇವಸ್ಥಾನಕ್ಕೆ ತೆನೆಯನ್ನು ತರಲಾಯಿತು. ಇಲ್ಲಿಯೂ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಿದ ಬಳಿಕ ಭಕ್ತಾಧಿಗಳಿಗೆ ತೆನೆಯನ್ನು ವಿತರಿಸಿದರು.

By suddi9

Leave a Reply

Your email address will not be published. Required fields are marked *