ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸೇಸಪ್ಪ ಕೋಟ್ಯಾನ್ ಪಚಿನಡ್ಕ ಇವರಿಂದ ಚಂಡಿಕಾಹೋಮ ನಡೆಯಿತು. ದೇವಳದ ಪ್ರ. ಅರ್ಚಕರಾದ ಮಾಧವಭಟ್ , ರಾಮ್ ಭಟ್, ಪರಮೇಶ್ವರ ಭಟ್, ನಾರಾಯಣ ಭಟ್ ,ಪರ್ದಖಂಡ ವಾಸುದೇವ ಭಟ್ ನೇತೃತ್ವದಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಿದರು. ಅರ್ಚಕರಾದ ರಾಜ ಐತಾಳ, ಅನಂತಭಟ್, ಗಿರೀಶ್ ಭಟ್ ಪೂಜೆಯಲ್ಲಿ ಸಹಕರಿಸಿದರು.



