ಬಜ್ಪೆ: ಪೊಲೀಸ್ ಠಾಣಾ ವ್ಯಾಪ್ತಿಯ ಬಡಗ ಎಕ್ಕಾರು ಗ್ರಾಮದ ನೀರುಡೆ ಎಂಬಲ್ಲಿ ಮಹಿಳೆ ಹಾಗೂ ಇಬ್ಬರು ಯುವಕರು ಸೇರಿ ನೀರುಡೆ ನಿವಾಸಿ ರಾಜು ಪೂಜಾರಿ(40) ಅವರನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ಸೆ.26ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಸುಲೋಚನಾ(38), ದಿನೇಶ(28), ಸುಧಾಕರ(30) ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳು.

murder

ಸುಲೋಚನಳಾ ಪತಿಯ ನಿಧನ ನಂತರ, ರಾಜು ಪೂಜಾರಿ ಆಕೆ ಮನೆಯಲ್ಲಿ ಇರುತ್ತಿದ್ದ, ಅವರ ನಡುವೆ ಪ್ರೇಮಾಂಕುರವಾಗಿತ್ತು ಎನ್ನಲಾಗುತ್ತಿದೆ. ರಾಜು ಪೂಜಾರಿ ಕುಡಿದು ಬಂದು ಸುಲೋಚನಾ ಹಾಗೂ ಆಕೆ ಇಬ್ಬರ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನುವ ಆರೋಪಗಳು ಕೇಳಿಬರುತ್ತಿದೆ. ತನ್ನ ಸಹೋದರಿಯ ಮಕ್ಕಳ ಸುಧಾಕರ, ದಿನೇಶ್ ಪೂಜಾರಿಯವರಿಗೆ ಈ ಕುರಿತು ಸುಲೋಚನಾ ಮಾಹಿತಿ ನೀಡಿದ್ದಳು ಭಾನುವಾರ ರಾತ್ರಿ ಇಬ್ಬರು ರಾಜು ಪೂಜಾರಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡಿರುವ ರಾಜು ಪೂಜಾರಿ ನಸುಕಿನ ಜಾವದಲ್ಲಿ ಸಾವನ್ನಪ್ಪಿದ್ದಾನೆ. ಬಜ್ಪೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ವೆನ್ಲಾಕ್ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

By suddi9

Leave a Reply

Your email address will not be published. Required fields are marked *