ಬಜಪೆ: ತುಳು ಮಾತೃ ಭಾಷೆಗೆ ಇನ್ನೂ ಸಾಂವಿಧಾನಿಕ ಮಾನ್ಯತೆ ಘೋಷಣೆಯಾಗದಿರುವುದು ಖೇದಕರ.  ವಿಶ್ವದ 177 ದೇಶಗಳಲ್ಲಿ ನಾನಾ ಮಾಧ್ಯಮಗಳ ಮೂಲಕ ‘ಬಲೆ ತೆಲಿಪಾಲೆ’ ಕಾರ್ಯಕ್ರಮವನ್ನು ಕೋಟ್ಯಾಂತರ ಮಂದಿ ವೀಕ್ಷಿಸಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವುದು ನಮಗೆ ಹೆಮ್ಮೆಯ ವಿಚಾರ ಅದಲ್ಲದೇ ಪ್ರತ್ಯೇಕ ಹಾಗೂ ಪ್ರಬುದ್ಧ ಕಲಾ ಪ್ರಕಾರವಾಗಿ ವಿಶ್ವವ್ಯಾಪಿ ಮನ್ನಣೆ ಪಡೆದಿರುವ ‘ಬಲೆ ತೆಲಿಪಾಲೆ’ ತುಳು ಮಾತೃ ಭಾಷೆಗೆ ಕಾಂತ್ರಿಕಾರಿ ಪ್ರಸರಣ ಹೆಚ್ಚಿಸಿದೆ ಎಂದು ಶಾಸ್ತ್ರಾವು ಶ್ರೀ ಭೂತನಾತೇಶ್ವರ ದೇವಸ್ಥಾನದ ಆಡಳಿತ ಮೋಕೇಸ್ತರ ವಿಜಯನಾಥ ವಿಠಲ ಶೆಟ್ಟಿ ಹೇಳಿದರು.

dsc_5508-copy

dsc_5514-copy

ಶಾಸ್ತ್ರಾವು ಶ್ರೀ ಭೂತನಾತೇಶ್ವರ ದೇವಳದ ಆವರಣದಲ್ಲಿ ಗುರುವಾರ ದೇವಳದ ಹಾಗೂ ನಮ್ಮ ಟಿ.ವಿ ಸಹಯೋಗದಲ್ಲಿ ಹಾಸ್ಯ ಸರಣಿ ‘ಬಲೆ ತೆಲಿಪಾಲೆ’ ಸೀಸನ್ 4ರ ಅರ್ಹತಾ ಸುತ್ತಿನ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

dsc_5555

dsc_5522-copy

ಗುರುಪುರ ವಜ್ರದೇವಿ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ ತುಳು ಭಾಷೆಗೆ ಕ್ರಾಂತಿಕಾರಿ ಬೆಳವಣಿಗೆಯ ತಿರುವು ನೀಡಿದ ಪ್ರಕಾರವಾಗಿ ‘ಬಲೆ ತೆಲಿಪಾಲೆ ‘ ಬೆಳೆದು ನಿಂತಿರುವುದು ಸ್ತುತಾರ್ಹ. ಅಲ್ಲದೇ ಈ ವೇದಿಕೆ ಅನೇಕ ಗ್ರಾಮೀಣ ಭಾಗದ ಕಲಾವಿದರ ಕಲಾ ಭವಿಷ್ಯವನ್ನು ಉಜ್ವಲಗೊಳಿಸಿದೆ. ನಗೆ ಮನುಷ್ಯನ ಮನಕ್ಲೇಶ ಮರೆಸಿ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸುತ್ತದೆ ಎಂದರು.

15-8-copy

‘ಬಲೆ ತೆಲಿಪಾಲೆ’ ಸೀಸನ್ -4 ರ ಅರ್ಹತಾ ಸುತ್ತಿನಲ್ಲಿ 40 ತಂಡವಿದ್ದು, ಹಾಸ್ಯ ಪ್ರಹಸನಗಳಿಂದ ಪ್ರೇಕ್ಷಕರ ಮನ ಸೆಳೆದಿವೆ. ವಿಜಯನಾಥ ವಿಠಲ ಶೆಟ್ಟಿ ಹಾಗೂ ಡಾ.ಶಿವಶರಣ್ ಶೆಟ್ಟಿ ಸ್ಪರ್ಧಾ ಸರಣಿಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

copy-of-15-2-copy

ಈ ಸಂದರ್ಭ ದೇವಳ ವತಿಯಿಂದ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಸಂಸದೆ ಶೋಭಾ ಕರಂದ್ಲಾಜೆ ಅವರ ಸಹೋದರ ಲಕ್ಷ್ಮಣ ಕರಂದ್ಲಜೆ, ನಮ್ಮ ಟಿ.ವಿ ಮುಖ್ಯಸ್ಥ ಡಾ.ಶಿವಶರರ್ಣ ಶೆಟ್ಟಿ, ಅಬ್ದುಲ್ ರೆಹಮಾನ್ ,ರಕ್ಷಿತ್ ಶೆಟ್ಟಿ, ಮಾನವ್ ವಿ. ಶೆಟ್ಟಿ, ಅರ್ಜುನ್ ರೈ, ಕುಸುಮಾಕರ್ ,ದೀಪ್ತಿ ಶೆಟ್ಟಿ, ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಡೆಮಾರ್ ಕಾರ್ಯಕ್ರಮ ಸಂಯೋಜಿಸಿದರು.

By suddi9

Leave a Reply

Your email address will not be published. Required fields are marked *