ಕೈಕಂಬ: ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿಯ ಪಾದಯಾತ್ರೆಯ ತಂಡ ಬಜಪೆ -ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.ಕ್ಷೇತ್ರದ ವತಿಯಿಂದ ಎಲ್ಲಾ ಭಕ್ತಧಿಗಳಗೂ ಫಲಹಾರ ಪಾನೀಯ ,ವಿಶ್ರಾಂತಿ, ವ್ಯವಸ್ಥೆ ಮಾಡಲಾಗಿತ್ತು.

ಕಟೀಲು ದೇವಿಯ ಬಗ್ಗೆ ಅಪಮಾಕಾರಿಯಾಗಿ ಪ್ರಕಟಿಸಿದ ಆರೋಪಿ ಖಂಡಿತಾ ಶೀಘ್ರ ಪತ್ತೆಯಾಗಬೇಕು ಎಂಬ ಒಕ್ಕೊರಲಿಲಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ , ಬಾಳೆಕೋಡಿ ಶ್ರೀ ಶಶಿಕಾಂತ ಸ್ವಾಮೀಜಿ\ಅವರುಗಳನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.ಪೆರಾರ-ಸುಂಕದಕಟ್ಟೆ-ಬಜಪೆ ಪರಿಸರ ಭಕ್ತದಿಗಳನ್ನು ಕೂಡಿಕೊಂಡು ಪಾದಯಾತ್ರೆ ಕಟೀಲು ಕ್ಷೇತ್ರದೆಡೆಗೆ ಸಾಗಿತು ಮಾಜಿ ಸಚಿವರಾದ ನಾಗರಾಜ ಶೆಟ್ಟಿ, ಕೃಷ್ಣ ಪಾಲೆಮಾರ್, ಮುಖಂಡರಾದ ಸತ್ಯಜಿತ್ ಸುರತ್ಕಲ್, ಭುಜಂಗ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು ಪಾದಯಾತ್ರೆ ಸಾಗಿದ ದಾರಿಯುದ್ದಕ್ಕೂ ಅಲ್ಲಲ್ಲಿ ಬಾಯಾರಿಕೆಗೆ ನೀರು ,ಪಾನಕ,ಪಾನೀಯ ವ್ಯವಸ್ಥೆ ಇತ್ತು.ಮಳೆ ಸಿಂಚನ ಶುಭ ಸೂಚಕ ಪಾದಯಾತ್ರೆಪೊಳಲಿ ಹಾಗೂ ಸುಂಕದಕಟ್ಟೆ ಕ್ಷೇತ್ರಗಳಿಗೆ ತಲಪುವಷ್ಟರಲ್ಲಿ ತುಂತುರು ಮಳೆ ಬಂದು ಎಲ್ಲರನ್ನು ಉಲ್ಲಾಸಿತಗೊಳಿಸಿತು.



























