ಕೈಕಂಬ:ಆಧುನಿಕ ಜೀವನಕ್ರಮದಲ್ಲಿ ಕೃಷಿ ಕೆಲಸಗಳಿಂದ ದೂರವಿದ್ದು ಆರೋಗ್ಯ ರಕ್ಷಣೆಗಾಗಿ ಪ್ರಕೃತಿ ಚಿಕಿತ್ಸೆ ಹೆಸರಲ್ಲಿ ದುಬಾರಿ ಕೆಸರು ಮಣ್ಣು ಮೈಗೆ ಹಚ್ಚಿಕೊಳ್ಳುವುದು ವಿಪರ್ಯಾಸ ಎಂದು ಪೊಂಪೈ ಚರ್ಚಿನ ಧರ್ಮಗುರುಗಳು ವಂದನೀಯ ಆ್ಯಂಟಿನಿ ಲೋಬೋ ಅಭಿಪ್ರಾಯಪಟ್ಟರು.
ಅವರು ಭಾನುವಾರ ಕಂದಾವರ ಹೊಸಗದ್ದೆಯಲ್ಲಿ ಪೊಂಪೈ ಯಂಗ್‍ಸ್ಟರ್ಸ್ ಕ್ಲಬ್ ಪ್ರಾಯೋಜಕತ್ವವದಲ್ಲಿ ನಡೆದ ಕೆಸರ್ಡ್ ಒಂಜಿದಿನ ಕಾರ್ಯಕ್ರಮವನ್ನು ಅಕ್ಕಿಯನ್ನು ಕಲಶದಲ್ಲಿ ತುಂಬುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.ಮುಖ್ಯಅತಿಥಿಯಾಗಿದ್ದ ಹವ್ಯಾಸಿ ಗಾಯಕ ಜೈಸನ್ ಸ್ವಿಕೇರಾ ಮಾತನಾಡಿ ನಗರವಾಸಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಜನರ ಜೀವನ ಪದ್ಧತಿ ಕೃಷಿ ಕಾರ್ಯಗಳ ಅರಿವು ಮೂಡಿಸಲು ಕೆಸರು ಗದ್ದೆಯಂತ ಕಾರ್ಯಕ್ರಮಗಳು ತುಂಬಾ ಸಹಕಾರಿ,ಭತ್ತ ಬೇಸಾಯ ತುಳುನಾಡಿನ ಪ್ರಾಚೀನ ಸಂಸ್ಕೃತಿಯಾಗಿದ್ದು ಇಂದಿನ ಜನರು ಕಷ್ಟದಲ್ಲಿ ಬೆಳೆ ಬೆಳೆಸುತ್ತಿದ್ದು ಕೃಷಿಗೆ ಉತ್ತೇಜನ ನೀಡುವ ಮೂಲಕ ಯುವಜನತೆಗೆ ಕೃಷಿಯಲ್ಲಿ ಆಸಕ್ತಿ ಬೆಳೆಯುವಂತೆ ಮಾಡಬೇಕೆಂದರು.
ಈ ಸಂದರ್ಭ ಕಂದಾವರದ ಹಿರಿಯ ಕೃಷಿಕ ಸುರೇಂದ್ರ ಶೇಣವರನ್ನು ಸನ್ಮಾನಿಸಲಾಯಿತು,ವೇದಿಕೆಯಲ್ಲಿ ಜಾನ್ಸನ್ ಲೋಬೋ,ಲಿಲ್ಲಿ ಮತಾಯಿಸ್,ಪೊಂಪೈ ಯಂಗ್‍ಸ್ಟರ್ಸ್‍ಕ್ಲಬ್ ಸಚೇತಕ ಗೊಡ್ವಿನ್ ತಾವ್ರೋ,ಅಧ್ಯಕ್ಷಿ ಅಮಿತಾ ಲೋಬೋ,ಕಾರ್ಯದರ್ಶಿ ಲವಿಶಾ ಡಿಸೋಜ,ಕ್ರೀಡಾ ಕಾರ್ಯದರ್ಶಿ ಪ್ರಿನೀತ್ ಮುಂತಾದವರು ಉಪಸ್ಥಿತರಿದ್ದರು.ಫ್ಲೋಸಿಟಾ ಡಿಸೋಜ ಸ್ವಾಗತಿಸಿ,ಪ್ರವೀಣ್ ಲೋಬೋ ನಿರೂಪಿಸಿದರು,ಲವೀಶಾ ಡಿಸೋಜ ವಂದಿಸಿದರು.















