ಕೈಕಂಬ: ಉಬ್ಬಸ ಕಾಯಿಲೆಯ ತಪಾಸಣೆಗೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಯರೊಬ್ಬರು ವೈದ್ಯರ ನಿರ್ಲಕ್ಷದಿಂದ ಮೃತಪಟ್ಟ ಘಟನೆ ಬಜಪೆ ಪೋಲಿಸ್ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬದ ಖಾಸಾಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ನಡೆದಿದೆ. ಗಂಜಿಮಠ ಸಮೀಪದ ಕುಕ್ಕಟ್ಟೆ ನಿವಾಸಿ ಸುಮತಿ (49) ಎಂಬವರು ಉಬ್ಬಸ ಖಾಯಿಲೆಯಿಂದ ಬಳಲುತ್ತಿದ್ದು ದೈಹಿಕವಾಗಿ ನಿತ್ರಾಣರಾಗಿದ್ದು ಗುರುಪುರ ಕೈಕಂಬದ ಖಾಸಾಗಿ ಆಸ್ಪತ್ರೆಯೊಂದಕ್ಕೆ ಆಗಮಿಸಿದಾಗ ಅಲ್ಲಿನ ವೈದ್ಯರು ಶಿಫಾರಸು ಮಾಡಿದಂತೆ 11.30 ರಿಂದ ಡ್ರಿಪ್ಸ್ ಅಳವಡಿಸಲಾಗಿತ್ತು ನಿರಂತರ 2.30ರ ಹೊತ್ತಿಗೆ ಸುಮತಿ ಅವರ ಪುತ್ರ ಎಬ್ಬಿಸಲು ಹೋದಾಗ ತಾಯಿ ಎಳದ ಕಾರಣವೈದ್ಯರನ್ನು ವಿಚಾರಿಸಿದಾಗ ಸುಮತಿ ಅವರ ಸ್ಥಿತಿ ಗಂಭೀರವಾಗಿದ್ದು ಬೇರೆ ಆಸ್ಪತ್ರೆಗೆ ವರ್ಗಾಯಿಸಬೇಕು ಎಂದು ಹೇಳಿ ” 108 ಆಂಬ್ಯುಲೆನ್ಸ್ ಗೆ ಕರೆ ಮಾಡಿದರು.
ಉಬ್ಬಸ ಕಾಯಿಲೆಯ ತಪಾಸಣೆಗೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಯರೊಬ್ಬರು ವೈದ್ಯರ ನಿರ್ಲಕ್ಷದಿಂದ ಮೃತಪಟ್ಟ ಘಟನೆ ಬಜಪೆ ಪೋಲಿಸ್ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬದ ಖಾಸಾಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ನಡೆದಿದೆ.
*ಆಸ್ಪತ್ರೆಯ ವೈದ್ಯರಿಗೆ ತಿಳಿಯದ್ದು 108 ವೈದಯರಿಗೆ ತಿಳಿಯಿತು.
ಆಸ್ಪತ್ರೆ ವೈದ್ಯರ ಕರೆಯಂತೆ 108 ಆಂಬ್ಯುಲೆನ್ಸ್ ಆಗಮಿಸಿತು ಸುಮತಿಯವರನ್ನು ಇನ್ನೇನು ಆಂಬ್ಯುಲೆನ್ಸ್ಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಆಂಬ್ಯುಲೆನ್ಸ್ನ ವೈದ್ಯಕೀಯ ಸಿಬ್ಬಂದಿ ಸುಮತಿಯವರನ್ನು ಪರೀಕ್ಷಿಸಿ ಅವರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು. * ಸುಮತಿಯವರ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.*

*ರೊಚ್ಚಿಗೆದ್ದ ಸಾರ್ವಜನಿಕರು.
ಸುಮತಿಯವರು ವೈದ್ಯರ ನಿರ್ಲಕ್ಷದಿಂದಾಗಿ ಮೃತಪಟ್ಟ ಸುದ್ದಿ ಎಲ್ಲೆಡೆ ಅದಾಗಲೇ ಹರಡಿದ್ದು ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಯ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿ ಹಠಾತ್ ಪ್ರತಿಭಟನೆಗೆ ಮುಂದಾದರು. ಈ ಮದ್ಯೆ ಇದೇ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದಾಗಿ ಮೃತಪಟ್ಟವರ ಸಂಖ್ಯೆ ಬಹಳಷ್ಟುವಿದೆ ಎಂಬುದು ಸಾರ್ವಜನಿಕರ ಆಕ್ರೋಷಕ್ಕೆ ಮುಖ್ಯ ಕಾರಣವಾಗಿತ್ತು ಒಂದೆರಡು ತಿಂಗಳ ಹಿಂದೆ ಹೆರಿಗೆಗೆಂದು ದಾಖಲಾದ ಗರ್ಭೀಣಿ ಮಹಿಳೆಯೊಬ್ಬರು ( ಕಂದಾವರ ಗ್ರಾ.ಪಂ. ಸಿಬ್ಬಂದಿ) ವೈದ್ಯರ ತಪ್ಪು ಮಾಹಿತಿ ಹಾಗೂ ನಿರ್ಲಕ್ಷದಿಂದಾಗಿ ಮೃತಪಟ್ಟಿರುವ ಪ್ರಕರಣದಲ್ಲೂ ನೂರಾರು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಆಗಮಿಸಿ ಪ್ರತಿಭಟನೆ ನಡೆಸಿದ್ದರು.
*ದೂರುಗಳೇ ದಾಖಲಾಗುತ್ತಿಲ್ಲ.
ವಿಪರ್ಯಸವೆಂದರೆ ಇಷ್ಟೆಲ್ಲಾ ಅನಾಹುತಗಳು ನಿರಂತರವಾಗಿ ನಡೆಯುತ್ತಿದ್ದರು ಸಂತ್ರಸ್ತರು ಯಾರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿಲ್ಲವಾದ ಕಾರಣ ಮರುಕಳಿಸಿತ್ತಿರುವ ಪ್ರಕರಣಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಸಾದ್ಯವಾಗುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಈ ಮದ್ಯೆ ನೂರಾರು ಸಾರ್ವಜನಿಕರು ಜಮಾಯಿಸಿ ಪ್ರತಿಭಟನೆಗೆ ಮುಂದಾಗುತ್ತಿರುವ ಸಂದರ್ಭ ಇನ್ಸಪೆಕ್ಟರ್ ಟಿ.ಡಿ. ನಾಗರಾಜ್ ನೇತೃತ್ವದಲ್ಲಿ ಬಜಪೆ ಪೊಲೀಸರ ತಂಡ ಆಗಮಿಸಿ ಆಕ್ರೋಷಿತ ಜನರಿಗೆ ಪರಿಸ್ಥಿತಿಯ ಮನವರಿಕೆ ಮಾಡಿ ಪ್ರತಿಭಟನೆ ನಡೆಸದಂತೆ ಮನವಿ ಮಾಡಿದರು. ಪ್ರತ್ಯೇಕವಾಗಿ ಖಾಸಗಿ ಆಂಬ್ಯುಲೆನ್ಸ್ ಕರೆಯಿಸಿ ಪೊಲೀಸರ ಉಪಸ್ಥಿತಿಯಲ್ಲಿ ಸುಮತಿಯವರ ಮೃತ ಶರೀರವನ್ನು ಸಾಗಿಸಲಾಯಿತು.


