ಕೈಕಂಬ:ಗುರುಪುರ ಕೈಕಂಬದ ಅವರ್ ಲೇಡಿ ಆಫ್ ಪೊಂಪೈ ಅಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಸಂಚಾಲಕಿ ಪ್ಲೋರೆನ್ಸ್ ಮೆಂಡಿಸ್ ಮುಖ್ಯ ಅತಿಥಿಯಗಿ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದಮ್ಯಾನೇಜರ್ ಟ್ರಸ್ಟಿ ವಾಲ್ಟರ್ ಸ್ಟೀಫನ್ ಮೆಂಡಿಸ್ ಶಿಕ್ಷಣವನ್ನು ಗೌರವಿಸಿ ಅಧ್ಯಕ್ಷೀಯ ಭಾಷಣ ಮಾಡಿದರು. ಪ್ರಾಂಶುಪಾಲ ಮಹೇಶ್ ಶೆಟ್ಟಿ, ಮುಖ್ಯ ಶಿಕ್ಷಕಿ ಸ್ವರ್ಣಲತಾ ಮತ್ತು ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಅಕ್ಸಾ ಸ್ವಾಗತಿಸಿ ಅಖಿಲೇಶ್ ವಂದಿಸಿದರು. ತಸ್ಕೀನ್ ಕಾರ್ಯಕ್ರಮ ನಿರೂಪಿಸಿದರು.

