ಉಳ್ಳಾಲ: ಪಿಎ ತಾಂತ್ರಿಕ ಮಹಾವಿದ್ಯಾಲಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಆ.11 ರಂದು ಕಾಲೇಜಿನ ಅವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಸಂಸ್ಥೆಯ ಕಾರ್ಯನಿರ್ವಾಹಣಾ ನಿರ್ದೇಶಕಾರಾದ ಅಬ್ದುಲ್ಲಾ ಇಬ್ರಾಹಿಂ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಆಡಳಿತ ನಿರ್ದೇಶಕರಾದ ಕೆ. ಎಂ. ಹನೀಫ್, ಪ್ರಾಂಶುಪಾಲರಾದ ಡಾ. ಅಬ್ದುಲ್ ಷರೀಫ್, ಉಪಪ್ರಾಂಶುಪಾಲರಾದ ಡಾ. ರಮೀಜ್ ಎಂ.ಕೆ. ಹಾಗೂ ಪಿ.ಎ. ಪಾಲಿಟೆಕ್ನಿಕ್ ಕಾಲೇಜ್ ಪ್ರಾಂಶುಪಾಲರಾದ ಪ್ರೋ. ಸೂಫಿ ವನಮಹೋತ್ಸವ ಹಾಗೂ ಅರಣ್ಯೀಕರಣದ ಪ್ರಾಮುಖ್ಯತೆಯ ಬಗ್ಗೆ ತಿಳಿಹೇಳಿದರು.

Vanamahotsava 1
ಶೈಕ್ಷಣಿಕ ನಿರ್ದೇಶಕರಾದ ಸರ್ಫರಾಜ್ ಹಾಶಿಂ, ಎಂ.ಬಿ.ಎ. ನಿರ್ದೇಶಕರಾದ ಡಾ. ಬೀರಾನ್ ಮೊೈದೀನ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ, ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ವಿವಿಧ ಪ್ರಬೇದದ ಸಸಿಗಳನ್ನು ಕಾಲೇಜಿನ ಆವರಣದಲ್ಲಿ ನೆಟ್ಟರು.

By suddi9

Leave a Reply

Your email address will not be published. Required fields are marked *