ಉಳ್ಳಾಲ: ಗ್ರೀನ್ ವೀವ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಅಡ್ಕರೆ ಪಡ್ಪು ಇದರ ಹಳೆವಿದ್ಯಾರ್ಥಿ ಸಂಘದ ಮಹಾಸಭೆಯು ಜನಾಬ್ ಕೆ.ಎಂ.ಕೆ ಮಂಜನಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು, ಮುಖ್ಯ ಅಥಿತಿಗಳಾಗಿ ಬಿ.ಎಂ ತುಂಬೆ, ಅಡ್ಕರೆಯ ಅಕ್ಷರ ಸಂತ ಜನಾಬ್ ಬಿ ಯೂಸುಪ್, ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಎವ್ಲಿನ್ ಡಿ ಐಮನ್, ಪ್ರೌಢ ಶಾಲಾ ಮುಖ್ಯೋಪಾದ್ಯಾಯಿನಿ ಆಗ್ನೆಸ್ ಸೋಝ .ಪಿ, ಹಸೈನಾರ್ ಮುಂತಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಪದಾದಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿಗಳಾಗಿ ಸಿರಾಜ್ ಅಡ್ಕರೆ, ಉಪಾಧ್ಯಕ್ಷರಾಗಿ ಮೊಹಮ್ಮದ್ ಮುಸ್ತಪಾ ಹಾಗೂ ಶ್ರೀಮತಿ ತಬಸ್ಸುಂ, ಖಜಾಂಜಿಯಾಗಿ ಜನಾಬ್ ಅಬೂಬಕ್ಕರ್ ,ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ನಮಿತ ಹಾಗೂ ಮೊಹಮ್ಮದ್ ನಿಯಾಝ್, ಸಂಘಟನಾ ಕಾರ್ಯದರ್ಶಿಯಾಗಿ ಖಾದರ್ ಎಂ, ಪತ್ರಿಕಾ ಕಾರ್ಯದರ್ಶಿಯಾಗಿ ಸಾದಿಕ್ ಆಯ್ಕೆಯಾದರು.
