ಉಳ್ಳಾಲ: ಈ ಮಾತನ್ನು ಆದಾಯ ತೆರಿಗೆ ಇಲಾಖೆಯ ಮಂಗಳೂರಿನ ಪ್ರಧಾನ ಆಯುಕ್ತರಾದ ನರೋತ್ತಮ ಮಿಶ್ರಾರವರು  ಆ.9 ರಂದು ನಿಟ್ಟೆ ವಿಶ್ವವಿದ್ಯಾಲಯವು ದೇರಳಕಟ್ಟೆಯ ಕ್ಯಾಂಪಸ್‍ನಲ್ಲಿ ಆಯೋಜಿಸಿದ “ಆದಾಯ ಘೋಷಣೆ ಯೋಜನೆ – 2016” ಕಾರ್ಯಕ್ರಮದಲ್ಲಿ ಮಾತನಾಡಿದರು. ಆದಾಯಕರ ಅಧಿನಿಯಮ 1961ರ ಅಡಿಯಲ್ಲಿ ತಮ್ಮ ಆದಾಯವನ್ನು ಈ ಹಿಂದಿನ ವರ್ಷಗಳಲ್ಲಿ ಘೋಷಿಸಿಕೊಳ್ಳದ ಹಾಗೂ ಸಂಪೂರ್ಣವಾಗಿ ಘೋಷಿಸಿಕೊಳ್ಳಲು ಬಾಕಿಯಿದ್ದ ಆದಾಯವನ್ನು ತಾವೇ ಮುಂದೆ ಬಂದು ಘೋಷಿಸಿಕೊಳ್ಳಲು ಎಲ್ಲರಿಗೂ ಅವಕಾಶ ಒದಗಿಸುವ ಸಲುವಾಗಿ ಕೇಂದ್ರ ಸರಕಾರದ 2016ರ ಮುಂಗಡ ಪತ್ರದಲ್ಲಿ ಘೋಷಿಸಲಾಗಿದೆ ಎಂದರು.Picture11

ಅವರು ವಿಶ್ವವಿದ್ಯಾಲಯದ ಹಿರಿಯ ಆಡಳಿತಾಧಿಕಾರಿಗಳು, ಅಧ್ಯಾಪಕರು ಮತ್ತು ವೈದ್ಯರುಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಈ ಯೋಜನೆಯ ವಿವರಗಳನ್ನು ನೀಡುತ್ತಾ ಆದಾಯ ತೆರಿಗೆ ಇಲಾಖೆಯು ಸದಾ ತೆರಿಗೆದಾರರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಿದರು. ಉಪನ್ಯಾಸದ ನಂತರ ಶ್ರೀ ನರೋತ್ತಮ ಮಿಶ್ರಾರವರು ಸಭಿಕರ ಪ್ರಶ್ನೆಗಳಿಗೆ ಸೂಕ್ತ ಮತ್ತು ತೃಪ್ತಿಕರ ಉತ್ತರವನ್ನು ನೀಡಿದರು. ಈ ಸಭೆಯಲ್ಲಿ ಜಂಟಿ ಆಯುಕ್ತರಾದ  ಚಂದ್ರಕುಮಾರ್ ರವರು ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಭೆಯನ್ನು ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ  ವಿನಯ ಹೆಗ್ಡೆಯವರು ಮಾತನಾಡುತ್ತಾ ನಮ್ಮ ಸಂಸ್ಥೆಯು ಸರಕಾರದ ಆದಾಯ ತೆರಿಗೆ ನಿಯಮಗಳನ್ನು ಸದಾ ಪಾಲಿಸುತ್ತಾ ಬಂದಿರುತ್ತದೆ ಹಾಗೆಯೇ ಮುಂದೆಯೂ ಇದೇ ರೀತಿ ಸಹಕಾರ ಕೊಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸಹ ಕುಲಾಧಿಪತಿಗಳಾದ ಡಾ| ಶಾಂತಾರಾಮ ಶೆಟ್ಟಿ ಮತ್ತು ಶ್ರೀ ವಿಶಾಲ್ ಹೆಗ್ಡೆಯವರು, ಕುಲಪತಿಗಳಾದ ಡಾ| ಎಸ್. ರಮಾನಂದ ಶೆಟ್ಟಿಯವರು, ಹಣಕಾಸು ನಿರ್ದೇಶಕರಾದ ಶ್ರೀ ಎಂ. ರಾಜೇಂದ್ರ ರವರು, ಕುಲಸಚಿವರಾದ ಡಾ| ಎಂ. ಎಸ್. ಮೂಡಿತ್ತಾಯರವರು ಮತ್ತು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *