ಬಜಪೆ: ಎಕ್ಕಾರು ಗ್ರಾಮ ಪಂಚಾುತಿ ವ್ಯಾಪ್ತಿಯ ಬಡಗ ಎಕ್ಕಾರು ಕೆಂಚಗುಡ್ಡೆ ಅಂಗನವಾಡಿಗೆ ಸೋಲಾರ್ ಅಳವಡಿಸಿರುವ ಬಗ್ಗೆ ಪರಿಶೀಲನೆ ಹಾಗೂ ಅಧ್ಯಯನ ನಡೆಸುವ ಸಲುವಾಗಿ ಎಂಆರ್‍ಪಿಎಲ್‍ನ ಸಿಎಸ್‍ಆರ್ ತಂಡ ಇತ್ತೀಚೆಗೆ ಆಗಮಿಸಿ ಅಂಗನವಾಡಿಯ ಹಾಗೂ ಕಾರ್ಯಕರ್ತೆಯ ಕ್ರಿಯಾಶೀಲ ಚಟುವಟಿಕೆಗಳು ಹಾಗೂ ಪ್ರಗತಿ ಬಗೆಗೆ ಶ್ಲಾಘನೆ ವ್ಯಕ್ತಪಡಿಸಿತು. ಎಂಆರ್‍ಪಿಎಲ್ ವತಿುಂದ ಜಿಲ್ಲೆಯಾದ್ಯಂತ ಅಂಗನವಾಡಿಗಳಿಗೆ ಸೋಲಾರ್ ಅಳವಡಿಕೆಯ ಉದ್ದೇಶದಿಂದ ನಡೆಸಲಾದ ಮಾದರಿ ಅಧ್ಯಯನ ಇದಾಗಿತ್ತು’ ಎಂದು ತಂಡದ ಮುಖ್ಯಸ್ಥೆ ವೀಣಾ ಡಿ.ಶೆಟ್ಟಿ ಹೇಳಿದರು.
29 vm Yekkar
ಅಂಗನವಾಡಿ ಕಾರ್ಯಕರ್ತೆ ನಿರ್ಮಲಾ ಭಾಸ್ಕರ ಭಟ್ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು. ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸುಂದರ ಪೂಜಾರಿ ತಂಡದ ಜತೆಗಿದ್ದರು.

By suddi9

Leave a Reply

Your email address will not be published. Required fields are marked *