ಬಜಪೆ: ಸಹಕಾರಿ ರಂಗದ ರಾಜ್ಯದಲ್ಲೇ ಪ್ರತ್ಠಿತ ಸಂಸ್ಥೆಯೆನಿಸಿದ ಬಜಪೆ ವ್ಯವಸಾಯ ಸೇವಾ ಬ್ಯಾಂಕ್ ರ್ವಾಕ ಲಾಭ ರೂ.7.5ಕೋಟಿ ಆಗಿದ್ದು ತನ್ನ ಸದಸ್ಯರಿಗೆ ಶೇ.18 ಡಿ”ಡೆಂಡ್ ಫೋಸಿದೆ. ಬ್ಯಾಂಕ್ ರ್ವಾಕ ಸಾಮಾನ್ಯ ಸಭೆ ಶನಿವಾರ ಬಜಪೆ ಸೈಂಟ್ ಜೋಸೆಫ್ ಚರ್ಚ್ ಸಭಾಂಗಣದಲ್ಲಿ ಬ್ಯಾಂಕ್ನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಈ ಸಂದರ್ಭ ಅವರು ಮಾತನಾಡಿ ಈ ಬ್ಯಾಂಕಿನ ಕಾರ್ಯಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಎಲ್ಲಾ ರೈತ ಸದಸ್ಯರಿಗೂ ಸರಕಾರದ ಯೋಜನೆಗಳ ಪ್ರಕಾರ ಬಡ್ಡಿ ರ”ತ, ಶೇ.3 ಬಡ್ಡಿ ಕೃಪಿ ಸಾಲ ನೀಡಲಾಗಿದೆ. ಬ್ಯಾಂಕಿನ ಅಭಿವೃದ್ಧಿಯಲ್ಲಿ ಸದಸ್ಯರ, ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿಗಳ ಶ್ರಮವೂ ಅಷ್ಟೋ ಮುಖ್ಯವಾಗಿದೆ. ಮಂದೆಯೂ ಸಮಾಜ ಮುಖಿಯಾಗಿ ಬೆಳವಣಿಗೆಯನ್ನು ಸಾಸುವ ಯೋಚನೆ ಸಾಕಾರಗೊಳ್ಳಲಿ” ಎಂದು ಅವರು ಹೇಳಿದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ ಅವರು ಲೆಕ್ಕ ಪರಿಶೋಧನಾ ವರದಿ, ಬ್ಯಾಂಕಿನ ಪ್ರಗತಿ ಹಾಗೂ ಸೇವೆಯ ಪ್ರಸ್ತುತ ವರದಿ ನೀಡಿದರು.
ಪ್ರಸ್ತುತ ಸಾಲಿನ ಅಂತ್ಯಕ್ಕೆ ಬ್ಯಾಂಕ್ ಸದಸ್ಯರಿಂದ ಸಂಗ್ರಹಿಸಿದ ಪಾಲು ಬಂಡವಾಳ 24.45ಕೋಟಿ ರೂ.ವರ್ಷಾಂತ್ಯದಲ್ಲಿ ದಾಖಲಾದ ಲಾಭಾಂಶ 7.5ಕೋಟಿ ರೂ. ಸದಸ್ಯರಿಗೆ 18ಶೇ. ಡಿವಿಡೆಂಟ್ ರೂಪದಲ್ಲಿ 3.87 ಕೋಟಿ ರೂ. ನೀಡಲಾಗುತ್ತದೆ. ರೂ 263 ಕೋಟಿಗಿಂತಲೂ ಹೆಚ್ಚು ದುಡಿಯುವ ಬಂಡವಾಳ ಹೊಂದಿರುವ ಬ್ಯಾಂಕ್ ತನ್ನ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮೆಯ ಮುಲಕ ಈ ವರ್ಷದಲ್ಲಿ ರೂ.35 ಲಕ್ಷದಷ್ಟು ನೀಡಲಾಗಿದೆ. ಬ್ಯಾಂಕ್ನ ಪ್ರಧಾನ ಕಛೇರಿ ಕಟ್ಟಡ ಹಸ್ತಂತರಗೊಂಡಿದ್ದು ಬಾಡಿಗೆ ಕಟ್ಟಡದಲ್ಲಿರುವ ಶಾಖೆಯ ಕಟ್ಟಡಗಳಿಗೂ ಸ್ವಂತ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ಬ್ಯಾಂಕ್ನ ಉಪಾಧ್ಯಕ್ಷ ವಸಂತ ನಿರ್ದೇಶಕರುಗಳಾದ ಸ್ಟೇನಿ ಡಿ’ಸೋಜಾ, ರಿತೇಶ್ ಶೆಟ್ಟಿ, ಡೇನಿಸ್ ಡಿ’ಸೋಜಾ, ಮಹಮ್ಮದ್ ಹನಿಫ್ ಭಾಸ್ಕರ ಮಲ್ಲಿ, ಲೀಲಾವತಿ, ಗೀತಾ ಕೆ. ಅಯೆನ್ ಉಪಸ್ಥತಿದ್ದರು ಸಿಬ್ಬಂದಿ ರಾಜೇಂದ್ರ ಪ್ರಸಾದ್ ಎಕ್ಕಾರು ಧನ್ಯವಾದವಿತ್ತರು
