ಮಾಣಿ : “ವಿಧ್ಯಾರ್ಥಿಗಳು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪ್ರಶ್ನೆಯಿಂದಲೇ ವಿಜ್ಞಾನದ ಬೆಳವಣಿಗೆ” ಎಂದರು. ಸಮಾರಂಭದ ಅಧ್ಯಕ್ಷರಾದ ಪ್ರಹ್ಲಾದ .ಜೆ. ಶೆಟ್ಟಿ ಯವರು “ ಪ್ರಯತ್ನ ದಿಂದ ಸಾಧನೆ ಸಾಧ್ಯ” ಎಂದರು. ಆಡಳಿತಾಧಿಕಾರಿಯಾದ ಸಿ . ಶ್ರೀಧರ್ ರವರು ಮಾತನಾಡುತ್ತಾ “ ವಿದ್ಯಾರ್ಥಿಗಳು ಜ್ಞಾನದೊಂದಿಗೆ ಸಂಸ್ಕಾರ ಕಲಿಯುವುದು ಅವಶ್ಯ” ಎಂದು ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿದ ಗೋಳ್ತಮಜಲು ಪ್ರೌಢ ಶಾಲಾಮುಖ್ಯೋಪಾಧ್ಯಾಯರಾದ ಜಯಕುಮಾರ್ ಹೇಳಿದರು. ಅವರು ಜು.18 ರಂದು ಸೋಮವಾರ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸಿ ಊದ್ಘಾಟಿಸಿ ಮಾತನಾಡಿದರು.

ಶಾಲಾ ಮಕ್ಕಳ ಪ್ರಾರ್ಥನೆ ಯೊಂದಿಗೆ ಆರಂ ಭವಾದ ಕಾರ್ಯಕ್ರಮದಲ್ಲಿ ವಿವಿಧ ಸಂಘಗಳ ಕಾರ್ಯದರ್ಶಿಗಳು ತಮ್ಮ ಸಂಘಗಳ ಮಹತ್ವ ತಿಳಿಸಿದರು .ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ .ವಿ. ಶೆಟ್ಟಿ , ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಗ್ರೇಸ್ .ಪಿ.ಸಲ್ಡಾನಾ ಉಪಸ್ಥಿತರಿದ್ದರು. ವಿಧ್ಯಾರ್ಥಿಗಳಾದ ಅಮಿತಾ ಸ್ವಾಗತಿಸಿ, ಸಹನಾ ವಂದಿಸಿದರು ಹಾಗೂ ಶ್ರೀ ಲಕ್ಷ್ಮೀ ಯವರು ಕಾರ್ಯಕ್ರಮ ನಿರ್ವಹಿಸಿದರು .
