ಬಂಟ್ವಾಳ: ಮನೆಮಂದಿಗೆ ತಲವಾರು ತೋರಿಸಿ ದನದ ಕೊಟ್ಟಿಗೆಗೆ ಅಕ್ರಮ ಪ್ರವೇಶಗೈದ ಆರು ಮಂದಿಯ ತಂಡವೊಂದು ಎರಡು ಜಾನುವಾರುಗಳನ್ನು ಕದ್ದೊಯಿದ ಘಟನೆ ಸಂಗಬೆಟ್ಟು ಗ್ರಾಮದಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂಗಬೆಟ್ಟು ಗ್ರಾಮದ ಉರ್ಬನ್ ಮನೆ ನಿವಾಸಿ ದಿನೇಶ್ ಸುವರ್ಣ ಎಂಬವರ ಮನೆಯ ದನದ ಕೊಟ್ಟಿಗೆಗೆ ದುಷ್ಕಮರ್ಿಗಳು ನುಗ್ಗಿ ಜಾನುವಾರುಗಳನ್ನು ಕಳವುಗೈದಿದ್ದಾರೆ.ಜೂ.4ರ ಮುಂಜಾನೆ 4.30ರ ವೇಳೆಗೆ ಈ ಘಟನೆ ನಡೆದಿದೆ.ಅಂದು ಮುಂಜಾನೆ ಟಾಟಾ ಸುಮೋ ವಾಹನವೊಂದರಲ್ಲಿ ಆಗಮಿಸಿದ್ದ 6ಮಂದಿ ದುಷ್ಕಮರ್ಿಗಳು ಬಂದಿದ್ದರೆನ್ನಲಾಗಿದೆ. ವಾಹನದ ಸದ್ದು ಕೇಳಿ ಹೊರಗಡೆ ಬಂದಾಗ ದುಷ್ಕಗಳು ನನಗೆ ತಲವಾರು ತೋರಿಸಿ ಬೆದರಿಕೆ ಒಡ್ಡಿ ಕೊಟ್ಟಿಗೆಯಿಂದ ಎರಡು ದನಗಳನ್ನು ವಾಹನದಲ್ಲಿ ತುಂಬಿಸಿ ಪರಾರಿಯಾಗಿದ್ದಾರೆಂದು ದಿನೇಶ್ ಸುವರ್ಣ ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಕಳವುಗೈದ ಎರಡು ದನಗಳ ಮೌಲ್ಯ 35000 ರೂ.ಆಗಬಹುದೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.ಘಟನೆ ನಡೆದ ಎರಡು ದಿನಗಳ ಬಳಿಕ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತೀಚೆಗೆ ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಇದೆ ಮಾದರಿಯಲ್ಲಿ ನಡೆದ ಜಾನುವಾರು ಕಳವು ಪ್ರಕರಣ ರಾಜ್ಯದಾದ್ಯಂತ ಸುದ್ದಿ ಮಾಡಿತ್ತು.ಈಗ ಅಂತಹದೆ ಮತ್ತೊಂದು ಪ್ರಕರಣ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಿದ್ದಕಟ್ಟೆಯಲ್ಲಿ ನಡೆದಿದ್ದು ಪೋಲಿಸರಿಗೆ ತಲೆನೋವು ತಂದಿದೆ.

By Suddi9

Leave a Reply

Your email address will not be published. Required fields are marked *