ಉಳ್ಳಾಲ: ಯುವಕರು ಸಮಾಜದಲ್ಲಿ ಉತ್ತಮ ಚಟುವಟಿಕೆಗಳನ್ನು ಮಾಡುವುದರಿಂದ ಮೂಲಕ ಎಲ್ಲಾ ವರ್ಗದ ಜನರ ಮೆಚ್ಚುಗೆಗೆ ಪಾತ್ರ ರಾಗಿ ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕು ಹಾಗೂ ಅಲ್ ಇಹ್ಸಾನ್ ಎಂಬ ಸಂಘಟನೆ ಆ ಕೆಲಸವನ್ನು ಮಾಡುತ್ತಿದೆ ಸಂಘಟನೆ ಮುಂದೆ ಉನ್ನತ ಸ್ಥಾನದಲ್ಲಿ ಮೂಡಿಬರಲಿ ಎಂದು  ಮುಹಿಯುದ್ದೀನ್ ಜುಮಾ ಮಸೀದಿಯ ಇದರ ಖತೀಬರಾದ ಬಹುಮಾನ್ಯ ಹಂಝ ಸಖಾಫಿ ರವರು ಪ್ರಾರ್ಥಿಸಿದರು.ಅವರು  ಭಾನುವಾರ ಗ್ರೀನ್ ವೀವ್ ಶಾಲೆಯ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.IMG-20160612-WA0041

IMG-20160612-WA0043

ನಂತರ ಆಯ್ದ ಕುಟುಂಬಗಳಿಗೆವ ಆಹಾರ ಸಾಮಾಗ್ರಿಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಸಿರಾಜ್ ಅಡ್ಕರೆ ಅಲ್ ಇಹ್ಸಾನ್ ಕಳೆದ 10 ವರ್ಷಗಳಿಂದ ಸಮಾಜದ ಬಡ ಜನರಿಗೆ ಜಾತಿ ಭೇದವಿಲ್ಲದೆ ಸಹಾಯ ಹಸ್ತ ನೀಡುತ್ತಾ ಬಂದಿದೆ,ಇದರ ಗಲ್ಫ್  ಹಾಗೂ ಊರಿನ ಸದಸ್ಯರ ಶ್ರಮ ಅಪಾರವಾದದ್ದು ಹಾಗೂ ಜನರ ಪ್ರಾರ್ಥನೆ ಹಾಗೂ ಹಿರಿಯರ ಆಶಿರ್ವಾದ ವೇ ಈ ಸಂಘಟನೆ ಈ ಮಟ್ಟಕ್ಕೆ ಬೆಳೆಯಲು ಕಾರಣ ಎಂದರು
ಕಾರ್ಯಕ್ರಮದಲ್ಲಿ ಮುಹಿಯಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ರಾದ ಬಹುಮಾನ್ಯ ಆದಂ ಮುಸ್ಲಿಯಾರ್,ಸಂಘಟನೆಯ ಅದ್ಯಕ್ಷರಾದ ನಿಯಾಜ್, ಗಲ್ಫ್ ಕಮಿಟಿಯ ಅಧ್ಯಕ್ಷರಾದ ಅಬ್ದುಲ್ ರಹಿಮಾನ್, ಸ್ಥಳೀಯ ಉದ್ಯಮಿ ಅಬ್ದುಲ್ ಖಾದರ್, ಮುಹಿಉದ್ದೀನ್ ಜುಮಾ ಮಸೀದಿಯ ಉಪಾದ್ಯಕ್ಷರಾದ ಜನಾಬ್ ಕೆ.ಬಿ.ಹುಸೈನ್ , ಅಲ್ ಇಹ್ಸಾನ್ ಮಾಜಿ ಅದ್ಯಕ್ಷರಾದ ಜನಾಬ್ ಮುಸ್ತಪಾ, ಪಂಚಾಯತ್ ಸದಸ್ಯರಾದ ಜನಾಬ್ ಅಬ್ದುಲ್ ಖಾದರ್, ಗೌರವಾದ್ಯಕ್ಷರಾದ ಜನಾಬ್ ಅಬೂಬಕ್ಕರ್ ಮುಂತಾದವರು ವೇದಿಕೆಯಲ್ಲಿದ್ದರು
ಸಂಘದ ಕಾರ್ಯದರ್ಶಿಯವರಾದ ಸಿದ್ದೀಕ್ ಬಿ.ಪಿ ಸ್ವಾಗತ ಮಾಡಿದರು. ದುವಾ ನೆರವೇರಿಸುದರ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು

By suddi9

Leave a Reply

Your email address will not be published. Required fields are marked *