ಉಳ್ಳಾಲ:ಪ್ರಥಮ ಕ್ರಿಕ್ಯೆನ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಯೇನೆಪೊಯ ವಿದ್ಯಾಲಯದ ವೈದ್ಯ ಶಿಕ್ಷಣ ವಿಭಾಗವು ದ. ಕ ಮತ್ತು ಉಡುಪಿ ಜಿಲ್ಲೆಗೆ ಒಳಪಡುವ ಕಾಲೇಜು ಹಾಗೂ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ವಿಭಾಗದವರಿಗೆ ಅಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದು ಫ್ರೊ.ಯು.ಟಿ.ಇಫ್ತಿಕಾರ್ ಆಲಿ, ಸಿಂಡಿಕೇಟ್ ಸದಸ್ಯರು- ಆರ್.ಜಿ.ಯು. ಹೆಚ್.ಎಸ್ ಬೆಂಗಳೂರು, ಇವರು ಪಂದ್ಯವನ್ನು ಉದ್ಘಾಟಿಸಿದರು ಹಾಗೂ ಡಾ.ವಿಜಯಕುಮಾರ್ ಗೌರವಾನ್ವಿತ ಉಪಕುಲಪತಿ ಯೇನೆಪೋಯ ವಿಶ್ವವಿದ್ಯಾಲಯ, ಇವರು ಮುಖ್ಯ ಅತಿಥಿಗಳಾಗಿದ್ದರು.

DSCN0476 (1)

ಯೇನೆಪೋಯ ವಿಶ್ವವಿದ್ಯಾಲಯವು ಮಂಗಳೂರು ವಿಶ್ವವಿದ್ಯಾಲಯದ ವಿರುದ್ಧ 8 ವಿಕೆಟ್ಗಳ ಜಯವನ್ನು ಸಾಧಿಸಿದ್ದು ಇವರಿಗೆ ಡಾ.ಅರುಣ್ ಭಾಗವತ್, ಉಪ ನಿರ್ದೇಶಕರು, ಸಂಶೋಧನಾ ವಿಭಾಗ ಯೇನೆಪೋಯ ವಿಶ್ವವಿದ್ಯಾಲಯ, ಪಾರಿತೋಷಕವನ್ನು ನೀಡಿ ಸನ್ಮಾನಿಸಿದರು.

By suddi9

Leave a Reply

Your email address will not be published. Required fields are marked *