ಇವರು ಮಹಾಲಿಂಗೇಶ್ವರ ಭಟ್ಆದರೆ ಚಾರಣಪ್ರೀಯರು ಪ್ರೀತಿಯಿಂದ ಕರೆಯುವುದು ಗಿರಿಭಟ್ಟರು ಎಂದು ಆಂದಹಾಗೆ ಅವರು ವಾಸ ಮಾಡುವುದು ಸುಬ್ರಮಣ್ಯದಿಂದ ಸುಮಾರು 6 ಕಿ,ಮೀ ದೂರದ ಕುಮಾರ ಪರ್ವತ ಸಾಗುವ ಗಿರಿಗದ್ದೆಯಲ್ಲಿ.
ಅವರಜೀವನವೇಒಂದುಕಥೆ ಮಾತ್ರವಲ್ಲ ಸಾಹಸಮಯವಾಗಿದೆ.ಸುಮಾರು 40 ವರ್ಷಗಳ ಹಿಂದೆತಂದೆಯವರಾದ ನಾರಾಯಣ ಭಟ್ರರು ಈ ಸ್ಥಳಕ್ಕೆ ಬಂದು ನೆಲೆ ನಿಂತರು ನಂತರಅವರು ಕಾಲವಾದ ಮೇಲೆ ಅವರ ಬೇರೆ ಮಕ್ಕಳು ಈ ಕಾಡು ಬೆಟ್ಟ ಪ್ರದೇಶದಲ್ಲಿ ವಾಸ ಮಾಡಲು ಹಿಂದೆ ಸರಿದಕಾರಣ ಸ್ವತಃಗಿರಿಭಟ್ಟರು ಈ ಪ್ರದೇಶದಲ್ಲಿ ಕೃಷಿ ಮಾಡಿಕೊಂಡು ಬಂದರು ಮೊದಲಿಗೆ ಸುಮಾರು 4 ಎಕರೆ ಪ್ರದೇಶದಲ್ಲಿ ಭತ್ತ ಮಾಡಿದ್ದ್ರುಆದರೆ ಅದು ಕಾಡು ಪ್ರಾಣಿಗಳ ಹಾವಳಿಯಿಂದ ಹೊದಾಗ ಅಡಿಕೆ ಹಾಕಿದ್ದಾರೆ ಅಲ್ಲದೆ ಹೈನುಗಾರಿಕೆಯನ್ನು ಕೂಡ ಮಾಡಿಕೊಂಡು ಬರುತ್ತಿದ್ದಾರೆ.
raghu

IMG_20160608_111632
ವರ್ಷಕ್ಕೆ ಸುಮಾರು 3-4 ಸಾವಿರ ಮಂದಿ ಚಾರಣ ಪ್ರೀಯರು ಕುಮಾರಪರ್ವತಕ್ಕೆ ಬರುತ್ತಾರೆ.ಈ ಸಂದರ್ಭದಲ್ಲಿಅವರಿಗೆ ಬೇಕಾದ ಊಟ ಉಪಹಾರದ ವ್ಯವಸ್ಥೆ ಮತ್ತುರಾತ್ರಿ ಉಳಿದುಕೊಳ್ಳುವ ವ್ಯವಸ್ಥೆಯನ್ನುಕಡಿಮೆ ವೆಚ್ಚದಲ್ಲಿ ಮಾಡಿಕೊಂಡು ಬರುತ್ತಿದ್ದಾರೆ.ಊಟಉಪಹಾರಕ್ಕೆ ಬೇಕಾದ ಸಾಮಾಗ್ರಿಗಳನ್ನು ಸುಬ್ರಮಣ್ಯದಿಂದ ನಡೆದುಕೊಂಡೇ ತರಬೇಕಾಗುತ್ತದೆ.ಇವರು ದಿನಕ್ಕೆ ಸುಮಾರು 25-30 ಕೆ.ಜಿಭಾರವಾದ ಸಾಮಾಗ್ರಿಗಳನ್ನು ಹೊತ್ತುಕೊಂಡುಗಿರಿಗದೆಯಿಂದ 1.30 ಗಂಟೆಯಲ್ಲಿ ಸುಬ್ರಮಣ್ಯಕ್ಕೆ ಹೋಗುತ್ತಾರೆ.ಆದರೆಚಾರಣಿಗರು ಈ ಸ್ಥಳವನ್ನು ತಲುಪಬೇಕಾದರೆ ಸರಿಸುಮಾರು 4. ರಿಂದ 5 ಗಂಟೆಯಾದರೂ ಬೇಕು.ಈ ಸಾಹಸಮಯವಾದದಾರಿಯನ್ನು ಸಾಗಬೇಕಾದರೆ ಕಷ್ಟಪಡಬೇಕಾಗುತ್ತದೆ.ಮಳೆಗಾಲದಲ್ಲಿಯಂತು ದಾರಿ ಸಾಗುವುದುಅತ್ಯಂತ ಅಪಾಯಕಾರಿ.ಈ ರೀತಿಯಾದ ದಾರಿಯನ್ನು ಸಾಗಿ ಜೀವನ ಸಾಗಿಸಿ ಚಾರಣಿಗರ ಪಾಲಿನ ಅಪದ್ಭಾಂಧವವಾಗಿದ್ದಾರೆ.

ಗಿರಿಗದ್ದೆ ಭಟ್ರವರು ಈ ಕಾಡು ಬೆಟ್ಟಗಳಿಂದ ಕೂಡಿದ ಪ್ರದೇಶದಲ್ಲಿ ವಾಸ ಮಾಡುವಾಗಎಲ್ಲರೂಅವರನ್ನು ಹಾಸ್ಯ ಮಾಡಿದವರು ಇದ್ದಾರೆ ಆದರೆಇಂದು ಅವರು ಸಾವಿರಾರು ಚಾರಣಿಗರ ಪಾಲಿನ ಮಾರ್ಗದರ್ಶಕರಾಗಿದ್ದಾರೆ.ಮಣಿನಿಂದ ನಿರ್ಮಾಣವಾದ ಮನೆಯಲ್ಲಿ ವಾಸ ಮಾಡಿ ಅದರೊಂದಿಗೆ ಕೃಷಿಯನ್ನು ಉಸಿರಾಗಿಸಿ ಬದುಕು ಸಾಗಿಸುವುದು ನಿಜವಾಗಿಯೂರೋಚಕ.
ಅವರನ್ನು ಮಾತನಾಡಿಸಿದಾಗ ನಾನು ಸುಮರು 40 ವರ್ಷಗಳ ಹಿಂದಿನಿಂದ ಈ ಪ್ರದೇಶದಲ್ಲಿ ವಾಸಮಾಡುತ್ತಿದ್ದು,ಒಂದು ವಿಶಿಷ್ಟವಾದ ಜೀವನ ಸಾಗಿಸುತ್ತಿದ್ದೇನೆ ಈ ಕಾಡುಗುಡ್ಡ ಪ್ರದೇಶದಲ್ಲಿವಾಸ ಮಾಡುವುದು ಮೊದಲು ಸವಾಲಿನ ವಿಷಯವಾಗಿತ್ತು ಮುಖ್ಯವಾಗಿ ದುರ್ಗಮವಾದ ಕಾಡುದಾರಿ.ಕಾಡು ಪ್ರಾಣಿಗಳ ಹಾವಳಿಆದರೆ ಈಗ ಅದಕ್ಕೆ ಹೊಂದಿಕೊಂಡು ಬದುಕು ಸಾಗಿಸುತ್ತಿದ್ದೇನೆ.ಸಾವಿರಾರುಚಾರಣಿಗರಿಗೆಅನ್ನದಾನ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯಎಂದು ಅವರು ಅಭಿಮಾನದಿಂದ ಹೇಳುತ್ತಾರೆ.

ಕನರ್ಾಟಕದಅತ್ಯಂತಎತ್ತರದಚಾರಣ ಪ್ರದೇಶವಾದ ಕುಮಾರ ಪರ್ವತಎರಲು ಸಾವಿರಾರುಜನರುದೂರದ ಊರುಗಳಿಂದ ಆಗಮಿಸುತ್ತಾರೆ.ವಿದೇಶಗಳಿಂದಲೂ ಚಾರಣ ಪ್ರೀಯರು ಬರುವುದುಇಲ್ಲಿನ ವಿಶೇಷವಾಗಿದೆ.ಹೀಗಾಗಿ ಎಲ್ಲಾಚಾರಣ ಪ್ರೀಯರುಗಿರಿಗದ್ದೆ ಭಟ್ರವರನ್ನು ಮಾತನಾಡಿಸದೆ ಹೊಗುದಿಲ್ಲ.ಅವರಿಗೆಅರಣ್ಯ ಅಧಿಕಾರಿಗಳು ಕೂಡ ಪ್ರೋತ್ಸಾಹ ನೀಡುತ್ತಾರೆ.ಚಾರಣದಲ್ಲಿ ವಹಿಸಬೇಕಾದ ಮುನ್ನೆಚರಿಕೆ ಬಗ್ಗೆಯೂ ಬರುವಎಲ್ಲಾಚಾರಣಿಗರಿಗೆ ನೀಡುತ್ತಿರುವಇವರು ನಿಜಕ್ಕೂಅಭಿನಂದನಾರ್ಹರುಅವರ ಸಾಧನೆಗೆ ಹಲವಾರು ಸಂಘ ಸಂಸ್ಥೆಯವರು ಗೌರವಿಸಿದ್ದಾರೆ,ಅವರ ಸೇವೆ ಇನ್ನಷ್ಟುಜನರಿಗೆ ಸಿಗಲಿ ಎಂಬುದು ನಮ್ಮ ಹಾರೈಕೆ.
ರಾಘವೇಂದ್ರ ಪ್ರಭು,ಕರ್ವಾಲು
ಪೋನ್-9880811036

By suddi9

Leave a Reply

Your email address will not be published. Required fields are marked *