ಕಟೀಲು:ಪುರಾಣ ಪ್ರಸಿದ್ಧ ಕಟೀಲು ದೇವಳದ ಅನುವಂಶಿಕ ಮೊಕ್ತೇಸರರಾಗಿ ಕೊಡೆತ್ತೂರು ಗುತ್ತು ಡಾ. ಕೆ. ರವೀಂದ್ರನಾಥ ಪೂಂಜಾ ಜೂ. 1 ರಂದು ಅಧಿಕಾರ ಸ್ವೀಕರಿಸಿದರು. ಮೊಕ್ತೇಸರಿಕೆ ವಾದವು ನ್ಯಾಯಾಲಯದಲ್ಲಿ ಕೊಡೆತ್ತೂರು ಗುತ್ತು ಕುಟುಂಬದ ಪರವಾಗಿ ಬಂದಿದ್ದು ಅನುವಂಶಿಕ ಮೊಕ್ತೇಸರಿಕೆಗೆ ಕೊಡೆತ್ತೂರುಗುತ್ತು ಕುಟುಂಬದ ಪರವಾಗಿ ಸರಕಾರದಿಂದ ಆದೇಶ ಬಂದಿತ್ತು. ಸದ್ರಿ ಅನುವಂಶಿಯ ಮೊಕ್ತೇಸರರಾಗಿ ಕೊಡೆತ್ತೂರು ಗುತ್ತು ಡಾ. ಕೆ. ರವೀಂದ್ರನಾಥ ಪೂಂಜಾ ಅಧಿಕಾರ ಸ್ವೀಕರಿದರು. ಈ ಸಂದರ್ಭ ಮೊಕ್ತೇಸರ ವಾಸುದೇವಆಸ್ರಣ್ಣ , ಹರಿನಾರಾಯಣದಾಸ ಆಸ್ರಣ್ಣ , ಮಾಜಿ ಸಚಿವ ಅಮರನಾಥ ಶೆಟ್ಟಿ , ಅಂತರಾಷ್ಟ್ರೀಯ ಖ್ಯಾತಿಯ ಕ್ರೀಡಾ ಪಟು, ಚಲನಚಿತ್ರ ನಟ ರೋಹಿತ್‍ಕುಮಾರ್‍ಕಟೀಲು, ಸುಧೀರ್ ಶೆಟ್ಟಿ , ಕಿಶೋರ್ ಶೆಟ್ಟಿ , ಹಿರ್ಗಾನ್ ದೇವಳದ ಆಡಳಿತ ಮೊಕ್ತೇಸರ ಭವಾನಿ ಶಂಕರ್, ಪ್ರವೀಣ್ ಶೆಟ್ಟಿ , ಕಿರಣ್ ಶೆಟ್ಟಿ , ದಯಾಕರ ಭಂಡಾರಿ, ಶ್ರೀಕಾಂತ್ ಹೆಗ್ಡೆ , ತೀರ್ಥಲ್ ರೈ, ಲತಾಮಣಿ ರೈ, ಮಲ್ಲಿಕಾ ರೈ, ಪ್ರಸಾದ್ ಶೆಟ್ಟಿ ಮತ್ತಿತರರು ಇದ್ದರು.
kateelu muktesara

By suddi9

Leave a Reply

Your email address will not be published. Required fields are marked *