ವಿಟ್ಲ: ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು, ಭಾಲಾವಲೀಕಾರ್   ರಾಜಾಪುರ ಸಾರಸ್ವತ ಸೇವಾ ಸಂಘ (ರಿ) ವಿಟ್ಲ ಹಾಗೂ ಪುತ್ತೂರು ಬೊಳ್ವಾರಿನ ಪ್ರಗತಿ ಹಾಸ್ಪಿಟಲ್ ಇದರ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಬಿರವು ಮೇ 22 ರಂದು ವಿಟ್ಲದ ಸಿಪಿಸಿಆರ್ ಐ ಹತ್ತಿರ ಮಂಗಳ ಮಂಟಪದಲ್ಲಿ ನಡೆಯಿತು.SHV_4199

SHV_4215

ಈ ಕಾರ್ಯಕ್ರಮವನ್ನು ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ಸಂದ್ಯಾ ಮೋಹನ್ ಸೇರಾಜೆ ಉದ್ಘಾಟಿಸಿದರು.  ಸಭಾಧ್ಯಕ್ಷತೆಯನ್ನು ಪತ್ತೂರು ಶ್ರೀ ಸರಸ್ವತಿ ಕ್ರಿಡಿಟ್ ಸೌದಾರ್ದ ಸಹಕಾರಿ ನಿಯಮಿತ ಇದರ ಉಪಾಧ್ಯಕ್ಷ ವಿನಯ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಗಳಾಗಿ ಭಾಲಾವಲೀಕಾರ್, ರಾಜಾಪುರ ಸಾರಸ್ವತ ಸೇವಾ ಸಂಘ ವಿಟ್ಲ ಇದರ ಅಧ್ಯಕ್ಷ ಶಶಿಧರ ನಾಯಕ್ ಮತ್ತು ವೈದ್ಯಕೀಯ ತಜ್ಞ ಡಾ| ಶ್ರೀಪತಿ ರಾವ್ ಭಾಗವಹಿಸಿದ್ದರು.  ಧನಂಜಯ ಸ್ವಾಗತಿಸಿದರು. ಚಿದಾನಂದ ವಂದಿಸಿದರು. ಪವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಸಹಕರಿಸಿದರು

By suddi9

Leave a Reply

Your email address will not be published. Required fields are marked *