ತನ್ನ 13 ವರ್ಷದ ಗೆಳೆಯನ ಮಗುವಿಗೆ 12 ವರ್ಷದ ಬಾಲಕಿಯೊಬ್ಬಳು ಜನ್ಮ ನೀಡಿದ್ದು, ಅವರಿಬ್ಬರು ದೇಶದ ಅತಿ ಚಿಕ್ಕ ವಯಸ್ಸಿನ ತಂದೆ ತಾಯಿಗಳೆಂಬ ದಾಖಲೆಗೆ ಪಾತ್ರರಾಗಿದ್ದಾರೆ. 
ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ 12 ವರ್ಷ ಮೂರು ತಿಂಗಳ ಪುಟ್ಟ ಬಾಲಕಿ ಕಳೆದ ವಾರ, 7 ಪೌಂಡ್ ಮಗುವಿಗೆ ಜನ್ಮ ನೀಡಿದ್ದಾಳೆ.
ಉತ್ತರ ಲಂಡನ್‌ನಲ್ಲಿ ನಡೆದ ಘಟನೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಹುಡುಗಿ ತನ್ನ ಪಕ್ಕದ ಮನೆಯ ಹುಡುಗನ ಜತೆ ಸಂಬಂಧವನ್ನು ಬೆಳೆಸಿದ್ದರಿಂದ ಗರ್ಭವತಿಯಾಗಿದ್ದಾಳೆ ಎಂದು ವರದಿ ತಿಳಿಸಿದೆ.
ತಾವು ತಂದೆತಾಯಿಗಳಾಗಿರುವುದಕ್ಕೆ ಹೆಮ್ಮೆ ಪಟ್ಟುಕೊಂಡಿರುವ ಆ ಪುಟ್ಟ ಪೋಷಕರು ತಮ್ಮ ಮಗುವಿನ ಜತೆ ತೆಗೆಸಿಕೊಂಡು ಫೋಟೋವನ್ನು ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ್ದಾರೆ.
ಆಕೆ ಸಪ್ಟೆಂಬರ್‌ನಲ್ಲಿ ಶಾಲೆಗೆ ವಾಪಸ್ಸಾಗ ಬಹುದೆಂದು ಹುಡುಗಿಯ ತಾಯಿ ತಿಳಿಸಿದ್ದಾಳೆ.
12ರ ತನ್ನ ಮಗಳು ತಾಯಿಯಾಗಿರುವುದರಿಂದ 27ರ ಆಕೆ ಇಂಗ್ಲೆಂಡ್‌ನ ಅತಿ ಚಿಕ್ಕ ವಯಸ್ಸಿನ ಅಜ್ಜಿ ಎನಿಸಿಕೊಂಡಿದ್ದಾಳೆ.
ಘಟನೆಯಿಂದ ಎರಡೂ ಕಡೆಯ ಅಜ್ಜಿಗಳಿಗೂ ಆಘಾತವಾದರೂ, ಇಬ್ಬರೂ ಸೇರಿ ಮಗುವನ್ನು ಮುತುವರ್ಜಿಯಿಂದ ಬೆಳೆಸುವ  ನಿಶ್ಚಯ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *