ಮೂಡುಬಿದರೆ: ಬಜರಂಗದಳ ಮುಖಂಡರೊಬ್ಬರಿಗೆ ಇಂಟರ್ನೆಟ್ ಕರೆ ಮುಖಾಂತರ ಜೀವಬೆದರಿಕೆಯೊಡ್ಡಿದ್ದು, ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಆರು ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಪ್ರಶಾಂತ್ ಪೂಜಾರಿ ಒಡನಾಡಿ, ಬಜರಂಗದಳದ ಮುಖಂಡ ಸುನೀಲ್ ಪೂಜಾರಿ ಇರುವೈಲ್ ಅವರಿಗೆ ಮಂಗಳವಾರ ಮಧ್ಯಾಹ್ನ 12.30 ಸುಮಾರಿಗೆ ಅನಾಮಧೇಯ ಕರೆ ಬಂದಿದೆ. `ಈ ಸುನೀಲ್ ಅತಾ, ಬಾರಿ ರಾಪುವನಾ?. ಒಂಜಿ ತಿಂಗಳುದ ಉಲಯಿ ನಿನ್ನನ್ ಕೆರ್ಪಾ ‘( ನೀನು ಸುನೀಲ್ ಅಲ್ವಾ?. ಬಾರಿ ಹಾರಾಡುತ್ತಿಯಾ. ನಿನ್ನನ್ನು ಒಂದು ತಿಂಗಳೊಳಗೆ ಸಾಯಿಸುತ್ತೇವೆ’ ಎಂದು ತುಳುವಿನಲ್ಲಿ ಬೆದರಿಕೆಯೊಡ್ಡಲಾಗಿದೆ. ಸುನೀಲ್ ಅವರು ಕರೆಯನ್ನು ರೆಕಾರ್ಡ್ ಮಾಡಿದ್ದು, ಮೂಡುಬಿದರೆ ಪೊಲೀಸರಿಗೆ ದೂರು ನೀಡಿದ್ದಾರೆ. ಮೂಡುಬಿದರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
