ಮುಂಬಯಿ: ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಮತ್ತು ಗುಣಮಟ್ಟದ ಬ್ಯಾಂಕ್ ಸೇವೆಗಾಗಿ ದಿ.ಮಹಾರಾಷ್ಟ್ರ ಸ್ಟೇಟ್ ಕೋ.ಅಪರೇಟಿವ್ ಬ್ಯಾಂಕ್’ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯ `ಸರ್ವೋತ್ಕೃಷ್ಟ ಬ್ಯಾಂಕ್ ಪುರಸ್ಕೃತ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ನ ಘಾಟ್ಕೋಪರ್ ಪಶ್ಚಿಮದ ಶಾಖೆಯನ್ನು ಸ್ಥಳೀಯ ಹೀರಾಚಂದ್ ದೇಸಾಯಿ ರೋಡ್ನಲ್ಲಿರುವ ದಿ ಲಕ್ಷ್ಮೀ ಶಾಪಿಂಗ್ ಸೆಂಟರ್ ಪ್ರಿಮೈಸಸ್ ಕೋ.ಅಪರೇಟಿವ್ ಸೊಸೈಟಿ ಲಿಮಿಟೆಡ್ನ ಮೊದಲ ಮಹಡಿಯಲ್ಲಿ ಸ್ಥಳಾಂತರಿಸಿ ಇಂದಿಲ್ಲಿ ಶುಕ್ರವಾರ ಬೆಳಿಗ್ಗೆ ಶುಭಾರಂಭ ಗೊಳಿಸಲಾಯಿತು.
Bharat Ghatkoper-W Shifting-2

Bharat Ghatkoper-W Shifting-3

Bharat Ghatkoper-W Shifting-5

Bharat Ghatkoper-W Shifting-6

Bharat Ghatkoper-W Shifting-7

Bharat Ghatkoper-W Shifting-8

Bharat Ghatkoper-W Shifting-9

Bharat Ghatkoper-W Shifting-A3

Bharat Ghatkoper-W Shifting-AA1
ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ರಿಬ್ಬನ್ ಕತ್ತರಿಸಿ ಶಾಖೆಯನ್ನು ಉದ್ಘಾಟಿಸಿದರು. ಪೊವಾಯಿ ಪಂಚಕುಠೀರದ ಶ್ರೀ ಸುವರ್ಣ ಬಾಬಾ ಅವರು ದೀಪ ಬೆಳಗಿಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆಯನ್ನೀಡಿದರು. ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್ ಎಟಿಎಂ ಸೇವೆಯನ್ನೂ, ನಿರ್ದೇಶಕಿ ಪುಷ್ಫಲತಾ ಎನ್.ಸಾಲ್ಯಾನ್ ಅವರು ಸೇಫ್ ಲಾಕರ್ ಸೇವೆಗಳಿಗೆ ಚಾಲನೆಯನ್ನೀಡಿ ಶುಭಾರೈಸಿದರು.

ಈ ಶುಭಾವಸರದಲ್ಲಿ ಕಟ್ಟಡ ಮಾಲಕ ಉದಯ ಶೆಟ್ಟಿ, ಡಿ.ಕೆ ಪೂಜಾರಿ, ಪತ್ರಕರ್ತ ಚಂದ್ರಶೇಖರ್ ಪಾಲೆತ್ತಾಡಿ, ಅರವಿಂದ್ ಶೆಟ್ಟಿ, ಮಾಬಿಯಾನ್ ಕೆ.ಎಂ., ಅಸೋಸಿಯೇಶನ್ನ ಚೆಂಬೂರ್ ಸ್ಥಳೀಯ ಸಮಿತಿಯ ಸಂಜೀವ ಬಂಗೇರ, ವಿಕ್ರೋಲಿ ಸ್ಥಳೀಯ ಸಮಿತಿಯ ರಾಘವ್ ಕುಂದರ್, ನಾರಾಯಣ ಶೆಟ್ಟಿ, ಡಾ| ಪ್ರಮೋದ್ ಸುಳೆ, ಕೌನ್ಸಿಲರ್ ಪ್ರೊ| ಎಸ್.ಕೃಪಾನಂದ್, ನ್ಯಾ| ಜಿ.ಸಿ.ಪೂಜಾರಿ, ಬ್ಯಾಂಕ್ನ ಮಾಜಿ ನಿರ್ದೇ ಶಕರುಗಳಾದ ಎನ್.ಎಂ ಸನಿಲ್, ರಾಜಾ ವಿ.ಸಾಲ್ಯಾನ್, ಎನ್.ನಿತ್ಯಾನಂದ, ಬ್ಯಾಂಕ್ನ ಹಾಲಿ ನಿರ್ದೇಶಕರುಗಳಾದ ಭಾಸ್ಕರ್ ಎಂ. ಸಾಲ್ಯಾನ್, ಜೆ.ಎ ಕೋಟ್ಯಾನ್, ಯು.ಎಸ್ ಪೂಜಾರಿ, ಎಸ್.ಬಿ ಅಮೀನ್, ಹರೀಶ್ಚಂದ್ರ ಜಿ.ಮೂಲ್ಕಿ, ಚಂದ್ರಶೇಖರ ಎಸ್.ಪೂಜಾರಿ, ದಾಮೋದರ ಸಿ.ಕುಂದರ್, ಆರ್.ಡಿ ಪೂಜಾರಿ, ಜ್ಯೋತಿ ಕೆ.ಸುವರ್ಣ, ಸಿ.ಟಿ ಸಾಲ್ಯಾನ್ ಸೇರಿದಂತೆ ಬ್ಯಾಂಕ್ನ ಅನೇಕ ಷೇರುದಾರರು, ಗ್ರಾಹಕರು, ಹಿತೈಷಿಗಳು ಆಗಮಿಸಿ ಶಾಖೆಯ ಸರ್ವೋನ್ನತಿಗೆ ಶುಭ ಹಾರೈಸಿದರು.

ಸಮಾರಂಭದಲ್ಲಿ ಬ್ಯಾಂಕ್ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಅನಿಲ್ ಕು ಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶೋಭಾ ದಯಾನಂದ್, ಉಪ ಪ್ರಧಾನ ವ್ಯವಸ್ಥಾಪಕರುಗಳಾದ ವಿವೇಕ್ ಎಸ್.ಶ್ಯಾನ್ಭಾಗ್, ಸುರೇಶ್ ಎಸ್.ಸಾಲ್ಯಾನ್, ವಿದ್ಯಾನಂದ ಎಸ್.ಕರ್ಕೇರ, ಪ್ರಭಾಕರ್ ಜಿ.ಸುವರ್ಣ, ದಿನೇಶ್ ಬಿ.ಸಾಲ್ಯಾನ್, ರಮೇಶ್ ಎಚ್., ವಿಶ್ವನಾಥ ಜಿ.ಸುವರ್ಣ, ಎನ್.ಜಗದೀಶ್, ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳಾದ ಪ್ರಭಾಕರ ಜಿ.ಪೂಜಾರಿ, ಸತೀಶ್ ಬಂಗೇರ, ಪ್ರವೀಣ್ ಸುವರ್ಣ, ಮಹೇಶ್ ಬಿ.ಕೋಟ್ಯಾನ್, ಡಾ| ಯು.ಧನಂಜಯಕುಮಾರ್, ವಾಸುದೇವ ಎಂ.ಸಾಲ್ಯಾನ್, ಅಭಿವೃದ್ಧಿ ಇಲಾಖೆಯ ಉನ್ನತಾಧಿಕಾರಿಗಳಾದ ಸುನೀಲ್ ಗುಜರನ್, ವಿಜಯ್ ಪಾಲನ್ ಮತ್ತಿತರರು ಹಾಜರಿದ್ದು ಶಾಖೆಯ ಸರ್ವೋನ್ನತಿಗೆ ಶುಭ ಕೋರಿದರು.

ಉಳ್ಳೂರು ಶ್ರೀ ಧನಂಜಯ ಶಾಂತಿ ಮತ್ತು ಶ್ರೀ ಶೇಖರ್ ಶಾಂತಿ, ಗಂಗಾಧರ ಕಲ್ಲಾಡಿ ಅವರು ವಾಸ್ತುಪೂಜೆ, ಗಣಹೋಮ, ಸತ್ಯನಾರಾಯಣ ಮಹಾಪೂಜೆ ದ್ವಾರಪೂಜೆ ನೆರವೇರಿಸಿ ತೀರ್ಥ-ಪ್ರಸಾದ ವಿತರಿಸಿ ಹರಸಿದರು. ಬ್ಯಾಂಕ್ ಅಧಿಕಾರಿ ಹೇಮಲತಾ ರಮೇಶ್ ಸಾಲ್ಯಾನ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಬ್ಯಾಂಕ್ನ ಉಪ ಪ್ರಧಾನ ಪ್ರಬಂಧಕ ಹಾಗೂ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಮೋಹನ್ ದಾಸ್ ಹೆಜ್ಮಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರತ್ನಾಕರ ಆರ್.ಸಾಲ್ಯಾನ್ ವಂದಿಸಿದರು.

ಚಿತ್ರ . ವರದಿ : ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *