ಬಜ್ಪೆ: ಜೆಬಿಎಫ್ ಕಂಪೆನಿಯು ಉದ್ಯೋಗಿಗಳಿಗೆ ಹುದ್ದೆಯಲ್ಲಿ ತಾರತಮ್ಯ, ವೇತನ ಇತ್ಯಾದಿ ತಾರತಮ್ಯ ಎಸಗಿ ವಂಚಿಸುತ್ತಿದೆ ಎಂದು ಆರೋಪಿಸಿ ಎಂಎಸ್ಇಝಡ್ ನಿರ್ವಸಿತರ ಹೋರಾಟ ಸಮಿತಿ ಬಜ್ಪೆಯಲ್ಲಿ ಪ್ರತಿಭಟನೆ ನಡೆಸುತ್ತಿದೆ.

ಎಂಎಸ್ಇಝಡ್ಗಾಗಿ ಭೂನಿರ್ವಸಿತರಿಗೆ ಉದ್ಯೋಗ ಭರವಸೆ ನೀಡಿ ಇದೀಗ ಉದ್ಯೋಗ ನೀಡದೆ ಜೆಬಿಎಫ್ ಪೆಟ್ರೋಕೆಮಿಕಲ್ಸ್ ಕಂಪೆನಿ ತನ್ನ ಪಿಡಿಎಫ್ ಕಾರ್ಮಿಕರಿಗೆ ಹುದ್ದೆಯಲ್ಲಿ ತಾರತಮ್ಯ, ವೇತನ ತಾರತಮ್ಯ ಕಾರ್ಮಿಕರಿಗೆ ಮೆಡಿಕಲ್ ಇನ್ಸುರೆನ್ಸ್ ಮತ್ತಿತರ ಸೌಲಭ್ಯ ನೀಡದೆ ವಂಚಿಸುತ್ತಿದೆ. ಈ ಬಗ್ಗೆ ಭೂ ನಿರ್ವಸಿತ ಕಾರ್ಮಿಕರು ಕಳೆದ ಆರು ತಿಂಗಳಿನಿಂದ ಈ ತಾರತಮ್ಯ ಸರಿಪಡಿಸಲು ಹಾಗೂ ಕಾರ್ಮಿಕರಿಗೆ ಸವಲತ್ತು ನೀಡಲು ಹಲವಾರು ಬಾರಿ ಕಂಎಪನಿಯ ಅಧಿಕಾರಿಗಳಿಗೆ ಕಾರ್ಮಿಕರು ಮನವಿ ಸಲ್ಲಿಸಿದ್ದರು. ಆದರೆ ಈವರೆಗೆ ಕಂಪೆನಿ ಸಮರ್ಪಕ ಉತ್ತರ ನೀಡಿಲ್ಲ ಎ ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕಳೆ ಮಾರ್ಚ 28ರಿಂದ 58 ಪಿಡಿಎಫ್ ಕಾರ್ಮಿಕರು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಈ ನಡುವೆ ಕಾರ್ಮಿಕರನ್ನು ಹತ್ತಿಕ್ಕುವ ಸಲುವಾಗಿ ನ್ಯಾಯಾಲಯದಿಂದ ಪ್ರತಿಭಟನೆಗೆ ಪ್ರತಿಬಂಧಕಾಜ್ಞೆ ತಂದು ಕಾರ್ಮಿಕರ ಹೋರಾಟಕ್ಕೆ ತಡೆ ನೀಡಿದೆ. ಆದರೆ ನ್ಯಾಯಾಲಯದ ಆದೇಶದಂತೆ 100 ಮೀಟರ್ ಒಳಗಡೆ ಪ್ರತಿಭಟನೆ ನಡೆಸದಂತೆ ಆದೇಶ ನೀಡಿದೆ. ಈ ನಡುವೆ ತಮ್ಮ ಬೇಡಿಕೆಗಳ ಬಗ್ಗೆ ಕಚಚರ್ೆ ನಡೆಸಲು ಜಂಟಿ ಸಭೆಯನ್ನು ಕರೆಯಲು ಕಂಪೆನಿ ಜೊತೆ ಹಲವಾರು ಬಾರಿ ಕೇಳಿಕೊಂಡರೂ ಈವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದಕ್ಕಾಗಿ ಈ ಹೋರಾಟ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಎಂಎಸ್ಈಝಡ್ ಯೋಜನೆಯಡಿಯಲ್ಲಿ ನಾವು ಮನೆ ಹಾಗೂ ಭೂಮಿಯನ್ನು ಕಳೆದುಕೊಂಡಿದ್ದು ಈ ಸಮಯ ಕಂಪೆನಿಯು ತಮಗೆ ಉತ್ತಮ ಸಂಬಳದ ಉದ್ಯೋಗ ಭರವಸೆ ನೀಡಿತ್ತು. ನಾವು ಕೆಪಿಬಿಯಲ್ಲಿ 2007ರಿಂದ ತರಬೇತಿ ಆರಂಭಿಸಿ 2011ಕ್ಕೆ 3ವರೆ ವರ್ಷಗಳ ತರಬೇತಿ ಪೂತರ್ಿಗೊಳಿಸಿ 2011ರಿಂದ 2014ರ ತನಕ ಉದ್ಯೋಗರಹಿತರಾಗಿದ್ದು, ಇದೀಗ ಸುಮಾರು 3 ವರ್ಷಗಳಿಂದ ಜೆಬಿಎಫ್ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಈ ಅವಧಿಯಲ್ಲಿ ನಾವು 10 ಸಾವಿರ ಸಂಬಳ ಪಡೆಯುತ್ತಿದ್ದೇವೆ. ಈ ಸಂಬಳ ಸಾಲುತ್ತಿಲ್ಲ. ಇದರಿಂದ ತುಂಬಾ ಸಮಸ್ಯೆಯಾಗಿದ್ದು, ಇದ್ದ ಜಮೀನನ್ನೂ ಕಳೆದುಕೊಂಡು ಅತಂತ್ರ ಸ್ಥಿತಿಯಲಿದ್ದೇವೆ. ಆದ್ದರಿಂದ ತಮ್ಮ ಹಲವು ಸಮಸ್ಯೆಯನ್ನು ಕಂಪೆನಿ ಕೂಡಲೇ ನೀಗಿಸಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.
