ಮುಂಬಯಿ, ಎ.04: ಮಾನವನನ್ನು ಮನುಷ್ಯನನ್ನಾಗಿ, ಮಾನವೀಯತೆ, ಹೃದಯವಂತಿಕೆ, ಮಾನಸಿಕ ವಿಶಾಲತೆ, ಕೌಶಲ್ಯತೆ, ಶಿಸ್ತು-ಸಂಯಮ, ಅಭಿಮಾನ-ಸ್ವಾಭಿಮಾನ, ಸಹಾಯ-ಸಹಕಾರ-ಸಹೋದರತ್ವ, ಗುಣಾತ್ಮಕ ಮೌಲ್ಯಗಳು, ವಿವೇಕ-ವಿನಮ್ರತೆ, ನಯ-ವಿನಯ-ವಿಮ್ರತೆ, ಪ್ರಯತ್ನ-ಪ್ರಾಮಾಣಿಕತೆ-ಶಿಸ್ತು ಮುಂತಾದ ಮಹಾಮಯ ಗುಣಗಳ ದಿವ್ಯ ಭವ್ಯ ಜ್ಯೋತಿ ಎದರೇನೆ ಶಿಕ್ಷಣ. ಶಿಕ್ಷಣವು ನಿರಂತರವಾದ ಪ್ರಕ್ರಿಯೆಯಾಗಿದೆ. ಬೆಳಕು ಜ್ಞಾನದ ಸಂಕೇತ. ಸವರ್ಾಂಗೀಣಮಯ ವಿಕಾಸದ ಮೂಲ ಬೇರು ಶಿಕ್ಷಣ. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟರೆ ಬೆಲೆಯನ್ನು ತಿಳಿಯಲು ಹೇಗೆ ಸಾದ್ಯವಿಲ್ಲವೋ ಹಾಗೆಯೇ ವಿದ್ಯಾಹೀನನಿಂದ ಸಂಪಾದಿಸಿದ ಅಧಿಕಾರ, ಅಂತಸ್ತು, ಸಂಪತ್ತು, ಐಶ್ವರ್ಯ ಅಲ್ಪಕಾಲಿಕ ಮಾತ್ರ. ವಿದ್ಯೆಯ ವಿವೇಕದ ಸಂಪತ್ತಿನಿಂದ ಆದರ್ಶ ರಾಷ್ಟ್ರದ ನಿಮರ್ಾಣ ಕಾರ್ಯದಲ್ಲಿ ನಿರತವಾಗಿರುವ ಈ ವಿದ್ಯಾ ದೇಗುಲ ರಾಷ್ಟ್ರಕ್ಕೆ ಅಲ್ಲ ವಿಶ್ವಕ್ಕೆ ಮಾದರಿಯಾಗಿದೆ. ವ್ಹಿ. ಪಿ. ಎಮ್ ಮಹಾ ವಿದ್ಯಾಲಯಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯದಲ್ಲಿಯೂ ಸಹಾಯ-ಸಹಕಾರ ಮಾಡಲು ನಾವು ಸದಾ ಸಿದ್ದರಿದ್ದೆವೆಂದು ಭರವಸೆಯ ಆಶ್ವಾಸನೆಯನ್ನು ಕೊಟ್ಟ ಅವರು ಜನ ಸೇವೆಯೇ ಜನಾರ್ಧನ ಸೇವೆ ಎನ್ನುವ ಮಹಾ ಮಂತ್ರದೊಂದಿಗೆ ವಿದ್ಯೆ, ಬುದ್ಧಿ, ಸಿದ್ಧಿಯ ಮೂಲಕ ಮಾನವ ಕುಲವನ್ನು ಅಜ್ಞಾನದಿಂದ-ಸುಜ್ಞಾನದೆಡೆಗೆ, ಕತ್ತಲೆಯಿಂದ-ಬೆಳಕಿನಡೆಗೆ ಸದ್ವಿಕಾಸಗೊಳಿಸುವ, ವಿದ್ಯಾ ಪ್ರಸಾರಕ ಮಂಡಳದ ಕಾಯಕ ಅತ್ಯದ್ಭುತ. ವಿದ್ಯಾ ಪ್ರಸಾರಕ ಮಂಡಳದ 57 ನೇ ಸ್ಥಾಪನಾಚರಣೆಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುಂಬಯಿ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ| ಸಂಜಯ್ ವಿ. ದೇಶಮುಖ್ ಅವರು ಮಾತನಾಡುತ್ತ ಶುಭ ಹಾರೈಸಿದರು.
ವಿದ್ಯಾ ಪ್ರಸಾರಕ ಮಂಡಳವು ಶಿಕ್ಷಣ ಪ್ರೇಮಿಗಳ ಭದ್ರವಾದ ಗೂಡು ಮತ್ತು ಆಥರ್ಿಕ ಸ್ಥರವಿಲ್ಲದೆ, ನಂಬಿಕೆ-ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಪ್ರೋತ್ಸಾಹ, ಉತ್ಸಾಹದ ಬೆಂಬಲದೊಂದಿಗೆ ಅಂದಿನ ಸಸಿ ಇಂದು ಪೂರ್ಣಮುಖದ ಶಶಿಯಾಗಿ ಬೆಳಕಿಗೆ ಬಂದಿರುವುದು ಕೇವಲ ಬೇಡಿಕೆ-ಹೂಡಿಕೆ-ಸಂಗ್ರಹದಿಂದೆಂದು ಹೇಳಿದ ಅವರು ವಿದ್ಯಾ ಪ್ರಸಾರಕ ಮಂಡಳದ ಪ್ರಧಾನಗೌರವ ಕಾರ್ಯದಶರ್ಿಗಳಾದ ಡಾ| ಪಿ.ಎಂ.ಕಾಮತ್ ಸಂಸ್ಥೆಯ ಸ್ಥಾಮನೆ, ಬೆಳೆದು ಬಂದ ಪರಿ, ವಿದ್ಯಾಥರ್ಿಗಳ ಸವರ್ಾಂಗೀಣ ವಿಕಾಸಕ್ಕಾಗಿ ಹಾಕಿಕೊಂಡ ಯೋಜನೆಗಳು, ಸೌಲಭ್ಯಗಳು, ಶಿಕ್ಷಣ ರಂಗದಲ್ಲಿಯ ಕ್ರಾಂತಿಯನ್ನು ವಿ.ಪಿ.ಎಂ ಇಂಟೀಗ್ರೇಶನ್ ನ್ಯಾಶನಲ್ ಸ್ಕೂಲ್ ಐರೋಳಿಯ ಉದಾಹರಣೆ ಮೂಲಕ ಹೇಳಿದರು. ಬಾಲವಾಡಿಯಿಂದ ಮಹಾ ವಿದ್ಯಾಲಯದವರೆಗಿನ ಕನ್ನಡ ಆಂಗ್ಲ ಮಾಧ್ಯಮ ಮತ್ತು ಅದರಲ್ಲಿಯ ವಿವಿಧ ವಿಷಯಗಳ ವಿಭಾಗಗಳು, ಕನ್ನಡ ಶಾಲೆಯ ಮಕ್ಕಳ ಕುರಿತು ತೆಗೆದುಕೊಳ್ಳುವ ವಿಶೇಷ ಜಾಗೃತಿಗಳು ಮುಂತದವುಗಳನ್ನು ವಿವರಿಸುತ್ತಾ ಅತಿಥಿ-ಗಣ್ಯರಿಗೆ ಶಾಲು ಹೊದಿಸಿ, ಫಲಪುಷ್ಪ ಕೊಟ್ಟು ಗೌರವಿಸಿದ ಸಂಸ್ಥೆಯ ಪ್ರಧಾನ ಗೌರವ ಕಾರ್ಯದಶರ್ಿಗಳು ಹಾಗೂ ಈ ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ಡಾ| ಪಿ ಎಮ್ ಕಾಮತ್ರು ಮಾತನಾಡುತ್ತಿದ್ದರು.
ವೇದಿಕೆಯಲ್ಲಿ ಡಾ| ಪಿ. ಎಮ್ ಕಾಮತ್, ಸಂಜಯ್ ವ್ಹಿ. ದೇಶಮುಖ್, ಡಾ| ಕೆ. ಮೋಹನ್, ಮಂಡಳದ ಸಹ ಕಾರ್ಯದಶರ್ಿ ಶ್ರೀಯುತ ಬಿ. ಎಚ ಕಟ್ಟಿ, ಜೊತೆ ಕಾರ್ಯದಶರ್ಿ ಶ್ರೀಮತಿ ಚಿತ್ರಾಕ್ಷಿ ಶೆಟ್ಟಿ, ಪ್ರಾಂಶುಪಾಲೆ ಶ್ರೀಮತಿ ನಿರುಪಾ ಜೊರಾಪುರ ಉಪಸ್ಥಿತರಿದ್ದರೆ, ಸಮಾರಂಭದಲ್ಲಿ ಮಂಡಳದ ಪದಾದಿಕಾರಿಗಳು, ನಿವೃತ್ತ ಪ್ರಾಂಶುಪಾಲರು, ಪ್ರಾಂಶುಪಾಲರು, ಶಿಕ್ಷಕರು, ಪಾಲಕರು, ವಿದ್ಯಾಥರ್ಿಗಳು ಸಮಾವೇಶವಾಗಿದ್ದರು.
ಸೇವಾ ನಿವೃತ್ತಿ ಹೊಂದುತ್ತಿರುವ ಕನ್ನಡ ಪ್ರೌಢ ಶಾಲೆಯ ಹಾಗೂ ಜ್ಯೂನಿಯರ ಕಾಲೇಜಿನ ಪ್ರಾಂಶುಪಾಲೆ ನಿರುಪಾ ಜೊರಾಪು ಅವರ ಪರಿಚಯವನ್ನು ಶಿಕ್ಷಕಿ ಶ್ರೀಮತಿ ಸುನಿತಾ. ಜಿ. ಮಠರು ಮಾಡಿದರೆ, ಅತಿಥಿ ಗಣ್ಯರು ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಿದರು.
ಈ ಕಾರ್ಯಕ್ರಮವು ಶಿಕ್ಷಕಿ ಶೈಲಜಾ ಜಿ.ದೇಶಪಾಂಡೆಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶಿಕ್ಷಕಿ ಶ್ರೀಮತಿ ಅಶ್ವಿನಿ ಪಿ. ಬಂಗೇರಾ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯ ಮೇಲೆ ಡಾ| ಕೆ. ಮೋಹನ್, ಸಹ ಕಾರ್ಯದಶರ್ಿ ಶ್ರೀಯುತ ಬಿ.ಹೆಚ್ ಕಟ್ಟಿ, ಸಹ ಖಜಾಂಚಿ ಪ್ರೊ| ಸಿ.ಜೆ ಪೈ ಉಪಸ್ಥಿತರಿದ್ದು, ಮಂಡಳದ ಜೊತೆ ಕಾರ್ಯದಶರ್ಿ ಚಿತ್ರಾಕ್ಷಿ ಶೆಟ್ಟಿ ಧನ್ಯವಾದವನ್ನು ಅಪರ್ಿಸಿದರು. ವಿದ್ಯಾಥರ್ಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಮಾಪನ ಗೊಂಡಿತು.



