ಇಸ್ಲಾಮಬಾದ್: ಮೋದಿ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿ, ಬಳಿಕ ಮೋದಿಯವರೊಂದಿಗೆ ಚರ್ಚೆ ನಡೆಸಿ ಪಾಕ್ ನೆಲದಲ್ಲಿ ಭಯೋತ್ಪಾದನೆಗೆ ಅವಕಾಶವಿಲ್ಲ ಎಂದು ಸಾರಿದ್ದ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಸ್ವದೇಶಕ್ಕೆ ಮರಳುತ್ತಿದ್ದಂತೆ ಉಲ್ಟಾ ಹೊಡೆದಿದೆ. ಷರೀಫ್ ಸ್ವದೇಶಕ್ಕೆ ಹಿಂದಿರುಗಿದ 24 ಗಂಟೆಯಲ್ಲಿ ಪಂಜಾಬ್ ಅಸೆಂಬ್ಲಿ ಆಫ್ ಪಾಕಿಸ್ತಾನ ‘ಮೋದಿ ಹೇಳಿಕೆ ವಿರೋಧಿಸುವ’ ವಿಧೇಯಕವನ್ನು ಧ್ವನಿಮತದಿಂದ ಆಂಗೀಕರಿಸಿದೆ. ತೆಹ್ರಿಕ್ – ಇ – ಇನ್ಸಾಫ್ ಮುಖಂಡ ಮಿಲನ್ ಮೆಹಮದೂರು ರಷೀದ್ ಈ ವಿಧೇಯಕವನ್ನು ಮಂಡಿಸಿದ್ದರು.
ಇಬ್ಬರು ನಾಯಕರ ಭೇಟಿಯ ವೇಳೆ, ಮೋದಿ ಗಡಿ ನುಸುಳುವಿಕೆಯ ಬಗ್ಗೆ ಷರೀಫ್ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಈ ಸಂಬಂಧ ಭಾರತದ ಕಠಿಣ ನಿಲುವಿನ ಮುನ್ಸೂಚನೆಯನ್ನು ನೀಡಿದ್ದರು. ಮೋದಿ ಆರೋಪವನ್ನು ನಿರಾಧಾರ, ಇದಕ್ಕೆ ಯಾವುದೇ ಪುರಾವೆಗಳಿಲ್ಲವೆಂದು ಪಂಜಾಬ್ ಅಸೆಂಬ್ಲಿ ಮೋದಿ ಹೇಳಿಕೆಯನ್ನು ಒಕ್ಕೂರಲಿನಿಂದ ತಿರಸ್ಕರಿಸಿ ವಿಧೇಯಕಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ಪಾಕಿಸ್ತಾನದ ದೈನಿಕ ‘ದಿ ನೇಶನ್’ ವರದಿ ಮಾಡಿದೆ.
ನವಾಜ್ ಷರೀಫ್ ಈ ಹಿಂದೆಯೂ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿ ಶಾಂತಿ ಸಂಧಾನ ನಡೆಸಿದ್ದರು. ಆದರೂ ಗಡಿಯಾಚೆ ಗುಂಡಿನ ದಾಳಿ ಮೊರೆಯುತ್ತಾ ಇತ್ತು, ದೇಶಕ್ಕೆ ದಾಳಿಯೂ ನಡೆದಿತ್ತು. ನಾಯಿ ಬಾಲ ಡೊಂಕು ಎಂಬುವುದನ್ನು ಪಾಇಕಸ್ಥಾನ ಮತ್ತೆ ಸಾಧಿಸಿ ತೋರಿಸಿದಂತಾಗಿದೆ.

