ಬಂಟ್ವಾಳ: ಇಲ್ಲಿನ ವೃತ್ತ ನಿರೀಕ್ಷಕರಾಗಿ ಬೆಳಿಯಪ್ಪರವರು ನಿಯುಕ್ತಿಗೊಂಡಿದ್ದು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ರಾಜಶೇಖರ್ ಮೇಸ್ತ್ರಿಯವರು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತುಗೊಂಡ ಬಳಿಕ ಪುತ್ತೂರಿನ ಬಿ.ಕೆ.ಮಂಜಯ್ಯ ಅವರನ್ನು ಪ್ರಭಾರರನ್ನಾಗಿ ನೇಮಕ ಗೊಳಿಸಲಾಗಿತ್ತು. ಇದೀಗ ಪೂರ್ಣವಧಿಗೆ ಬೆಳಿಯಪ್ಪ ಅವರನ್ನು ಬಂಟ್ವಾಳ ಸಿ.ಐ ಯಾಗಿ ಸರಕಾರ ನೇಮಕಗೊಳಿಸಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಇವರು ಇಲ್ಲಿನ ಮೊದಲ ಎಸ್.ಐ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿಯು ಎಸ್ ಐ ಯಾಗಿ ಕಾರ್ಯ ನಿರ್ವಹಿಸಿ ಬಳಿಕ ಭಡ್ತಿಗೊಂಡು ಭಟ್ಕಳ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದು ಈಗ ಅಲ್ಲಿಂದ ಬಂಟ್ವಾಳಕ್ಕೆ ವರ್ಗಾಯಿಸಲಾಗಿದೆ.
