ಕೈಕಂಬ:  ಪ್ರತಿಯೊಬ್ಬರಿಗೂ ಸಾಮಾನ್ಯ ಕಾನೂನಿನ ಅರಿವು ಇರುವುದು ಅಗತ್ಯ ಎಂದು ದಿಶಾ ಸಂಸ್ಥೆಯ ನಿರ್ದೇಶಕರಾದ ಸಿಲ್ವೆಸ್ಟರ್ ಡಿ ಸೋಜ ಹೇಳಿದರು. ಅವರು ಮೂಡುಶೆಡ್ಡೆ ಬೊಟ್ಟಿಕೆರೆಯಲ್ಲಿ ನಡೆದ ನಾಲ್ಕು ದಿನಗಳ ಅಸಂಘಟಿತ ಕಾರ್ಮಿಕರ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

???????????????????????????????

20160311_114141

20160311_114309ಭಾರತ ಸರಕಾರದ ಕೇಂದ್ರೀಯ ಕಾರ್ಮಿಕ ಶಿಕ್ಷಣ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಮಂಗಳೂರು ಇವರ ಆಶ್ರಯದಲ್ಲಿ ದಿಶಾ ಟ್ರಸ್ಟ್ (ರಿ) ಕೈಕಂಬ ಮತ್ತು ನೇಸರ ಗ್ರಾಮ ಸಮಿತಿ ಮೂಡುಶೆಡ್ಡೆ ಇವರ ಸಹಕಾರದೊಂದಿಗೆ ನಡೆದ ತರಭೇತಿ ಕಾರ್ಯಗಾರದ ಉದ್ಘಾಟಣಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ನೇಸರ ಗ್ರಾಮ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಆಳ್ವಾ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಕೇಂದ್ರೀಯ ಕಾರ್ಮಿಕ ಶಿಕ್ಷಣ ಮಂಡಳಿಯ ಶಿಕ್ಷಣಾಧಿಕಾರಿಯಾದ ಶ್ರೀ ಸತೀಶ್ ಕುಮಾರ್ ಮಾತನಾಡಿ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರಕಾರಿ ಯೋಜನೆಗಳ ತಿಳುವಳಿಕೆ ನೀಡುವುದು ಅಗತ್ಯವಾಗಿದೆ ಎಂದರು . ನೇಸರ ಗ್ರಾಮ ಸಮಿತಿಯ ಕಾರ್ಯದರ್ಶಿ ಕು/ಯಲ್ಸ್ ಡಿ ಸೋಜ, ಕೋಶಾಧಿಕಾರಿ ಫೆಲಿಕ್ಸ್ ಮೊಂತೆರೋ, ಜತೆ ಕಾರ್ಯದರ್ಶಿ ಐರಿನ್ ಮಿನೇಜಸ್ ಕೆರಮ ಉಪಸ್ಥಿತರಿದ್ದರು.
ನಾಲ್ಕು ದಿನಗಳ ತರಬೇತಿ ಕಾರ್ಯಗಾರದಲ್ಲಿ ಭೂ ನೋಂದಾಣಿ, ಸರಕಾರದ ವಿವಿಧ ಸೌಲಭ್ಯಗಳು, ಆರೋಗ್ಯ ಜಾಗೃತಿ ಸಾವಯವ ಕೃಷಿ ಮತ್ತು ಹೈನುಗಾರಿಕೆ , ಸಂಘಟನೆ ಬಲವರ್ಧನೆ, ನಾಯಕತ್ವ ವಿಷಯಗಳ ಮೇಲೆ ತರಭೇತಿಯನ್ನು ನಡೆಸಲಾಯಿತು.ಮಂಗಳೂರಿನ ವಕೀಲರಾದ ಶ್ರೀ ಸಂತೋಷ್ ಪೀಟರ್ ಡಿ ಸೋಜ, ಬೋಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಧಿಕಾರಿ ಶ್ರೀ ಪ್ರಶಾಂತ್ , ದಿಶಾ ಸಂಸ್ಥೆಯ ಸಂಯೋಜಕರಾದ ಹೆನ್ರಿ ವಾಲ್ಡರ್ ಮತ್ತು ಕ್ಷೇತ್ರ ಸಂಯೋಜಕರಾದ ರುದೇಶ್ ತರಬೇತಿಯನ್ನು ನೀಡಿದರು.  ಸಮಾಜ ಕಾರ್ಯ ಕಾಲೇಜಿನ ವಿದ್ಯಾರ್ಥಿಗಳಾದ ಅನ್ಸು ಡೈಮಾರಿ ಸ್ವಾಗತಿಸಿ ಕಾರ್ತಿಕ್ ವಂದಿಸಿದರು.

By Suddi9

Leave a Reply

Your email address will not be published. Required fields are marked *