ತುಳುನಾಡಿನಲ್ಲಿ ವಿವಿಧ ಜಾತಿಕಟ್ಟು ಪಾಡುಗಳಿದ್ದರೂ ಎಲ್ಲರೂ ಒಳಗೊಳ್ಳುವ ಬಹುದೊಡ್ಡ ಗುಣ ನಮ್ಮ ನೆಲದ ಸಂಸ್ಕೃತಿಯಲ್ಲಿದೆ. ಮನುಷ್ಯ ಪ್ರೀತಿ ಎಂಬುದು ಪ್ರಕೃತಿಯಷ್ಟೇ ಸಹಜ. ಪರಸ್ವರ ಅಪನಂಬಿಕೆ ದ್ವೇಷದಿಂದ ಮನಃಶಾಂತಿ ಮರೀಚಿಕೆಯಾಗುತ್ತದೆ. ಮನುಷ್ಯನ ಮನಸ್ಸು ನಿರ್ಮಲಗೊಂಡು ಸಾತ್ವಿಕ ಮತ್ತು ಧನಾತ್ಮಕ ಚಿಂತನೆ ನಮ್ಮಲ್ಲಿ ಬಂದಾಗ ಮಾತ್ರ ಬ್ರಹ್ಮಕಲಶದ ವೈಭವಕ್ಕೆ ಅರ್ಥ ಬರುತ್ತದೆ. ಎಂದು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ನುಡಿದರು.DSC_0176

DSC_0108

DSC_0132

ಅವರು ಸಿದ್ದಕಟ್ಟೆ ಸಮೀಪದ ಪೂಂಜ ಪಂಚದುರ್ಗಾಪರಮೇಶ್ವರಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಾ ನುಡಿದರು.
ಬ್ರಹ್ಮಕಲಶವನ್ನು ಉದ್ಘಾಟಿಸಿದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ/. ಪದ್ಮಪ್ರಸಾದ ಅಜಿಲರು ಮಾತನಾಡಿ ಪೂಂಜ ಕ್ಷೇತ್ರ ಬಹಳ ಚಾರಿತ್ರಿಕ ಹಿನ್ನಲೆ ಇರುವ ಕ್ಷೇತ್ರವಾಗಿದ್ದು, ಒಂದು ಕಾಲದಲ್ಲಿ ಅಜಿಲ ಸೀಮೆಯೊಂದಿಗಿದ್ದ ಸಂಬಂಧವನ್ನು ನೆನಪಿಸಿಕೊಂಡರು. ದೇವಾಲಯಗಳು ಕೇವಲ ಭೌತಿಕ ತಾಣವಾಗದೆ ಮನುಷ್ಯನ ಬುದ್ಧಿ-ಭಾವಗಳ ಉದ್ದೀಪನ ಕೇಂದ್ರವಾಗಬೇಕಾದ ಔಚಿತ್ಯವನ್ನು ವಿವರಿಸಿದರು.

ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ ಇಂದು ದೇವಾಲಯ ಅಭಿವೃದ್ಧಿಗೆ ಆರ್ಥಿಕ ಕೊತರೆಯಿಲ್ಲ. ಸರಕಾರ, ದಾನಿಗಳು, ಭಕ್ತರು ನೆರವಿನಿಂದ ದೇವಾಲಯ ನಿರ್ಮಾಣ ಹಾಗೂ ಅಭಿವೃದ್ಧಿಕಷ್ಟದಾಯಕವಲ್ಲ. ಆದರೆ ಮನುಷ್ಯ-ಮನುಷ್ಯನೋಂದಿಗೆ ಹೊಂದಿಕೊಂಡು ಬದುಕುವ ಸಾಮರಸ್ಯದ ವಾತಾವರಣ ನಾಡಿನಾದ್ಯಂತ ನೆಲೆಸಲಿ ಎಂದು ನುಡಿದರು. ಮುಖ್ಯ ಅತಥಿಗಳಗಿ ಬಂಟ್ವಾಳ ಪುರಸಭೆಯ ರಾಮಕೃಷ್ಣ ಆಳ್ವ ಉದ್ಯಮಿ ರವಿಶಂಂಕರ ಶೆಟ್ಟಿ ಬಡಾಜೆ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಗುಲಾಬಿ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಪಿ. ಅನಂತ ಆಚಾರ್ಯ ಪ್ರಸ್ತಾವನೆ ಗೈದರು. ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ಸ್ವಾಗತಿಸಿದರು. ಉಮೇಶ್ ಶೆಟ್ಟಿ ಪಾಲ್ಯ, ಬೂಬ ಮಾಸ್ತರ್ ಅಗಲಿದ ಚೇತನಗಳಿಗೆ ನುಡಿ ನಮನ ಸಲ್ಲಿಸಿದರು. ಸಮಿತಿಯ ಕಾರ್ಯಧ್ಯಕ್ಷ ರಮೇಶ್ ಮಂಜಿಲ, ಜೀರ್ಣೋಧ್ದಾರ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಚೌಟ, ಪ್ರಧಾನ ಕಾರ್ಯದರ್ಶಿ ರತ್ನಾಕರ ಚೌಟ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಶಿವಯ್ಯ ಎಸ್.ಎಲ್. ವಂದಿಸಿದರು.

By Suddi9

Leave a Reply

Your email address will not be published. Required fields are marked *