ಬಂಟ್ವಾಳ, ಮಾ. 15: ತಾಲೂಕಿನ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಗ್ರಾಮಗಳಲ್ಲಿನ ನೀರಿನ ಸಮಸ್ಯೆ ಹಾಗೂ ಕಂದಾಯ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ಸಭೆ ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಬಿ.ಸಿ.ರೋಡ್ ಜಿಪಂ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ತಾಪಂ ಮುಖ್ಯ ಕಾರ್ಯ ನಿರ್ವಾಣಾಧಿರಿ, ತಹಶೀಲ್ದಾರ್ ಪುರಂದರ ಹೆಗಡೆ, ಪುದು ಜಿಪಂ ಸದಸ್ಯ ರವೀಂದ್ರ ಬಂಬಳಿ, ಕುರ್ನಾಡು ಜಿಪಂ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಹಾಗೂ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಮಾತನಾಡಿದ ಸಚಿವ ಯು.ಟಿ.ಖಾದರ್, ನೀರಿನ ಸಮಸ್ಯೆ ಪರಿಹರಿಸಲು ಅನುದಾನದ ಯಾವುದೇ ಕೊರತೆ ಇಲ್ಲ. ಎಲ್ಲ ಗ್ರಾಪಂ ಸದಸ್ಯರು ತಮ್ಮ ವಾಡರ್್ಗಳಲ್ಲಿರುವ ನೀರಿನ ಸಮಸ್ಯೆಯನ್ನು ಗುರುತಿಸಿ ತುರ್ತು  ಪರಿಹಾರ ಕ್ರಮಕ್ಕೆ ಮುಂದಾಗಬೇಕು. ಅದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಅಧಿಕಾರಿಗಳು ನೀಡಬೇಕು ಎಂದು ಹೇಳಿದರು.
ಅಧಿಕಾರಿಗಳು ಗೊಂದಲಕ್ಕೆ ಒಳಗಾಗುವುದನ್ನು ನಿಲ್ಲಿಸಬೇಕು. ನೀರಿನ ಸಮಸ್ಯೆ ಇರುವಲ್ಲಿ ಹಳೆ ಬೋರ್ವೆಲ್ಗಳಿದ್ದರೆ ಅವುಗಳನ್ನೇ ಇನ್ನಷ್ಟು ಆಳ ತೋಡಿಸಿ ನೀರು ಒದಗಿಸಲು ಪ್ರಯತ್ನಿಸಿ. ಅದು ವಿಫಲವಾದರೆ ಮಾತ್ರ ಬೋರ್ವೆಲ್ಗಳನ್ನು ಕೊರೆಸಿ. ಬರೇ ಒಂದೆರಡು ತಿಂಗಳು ಮಾತ್ರ ನೀರಿನ ಸಮಸ್ಯೆ ಎದುರಿಸುವ ಪ್ರದೇಶಗಳಲ್ಲಿ ಹೊಸ ಬೋರ್ವೆಲ್ಗಳನ್ನು ಕೊರೆಸುವ ಬದಲು ಸಮೀಪವಿರುವ ಬೋರ್ವೆಲ್ಗಳ ನೀರು ಅಲ್ಲಿಗೆ ಪೂರೈಸಲು ಕ್ರಮ ತೆಗೆದುಕೊಳ್ಳಿ ಅವರು ಸಲಹೆ ನೀಡಿದರು.

1
ನೀರಿನ ಟ್ಯಾಂಕ್ ನಿರ್ಮಾಣದ ಬಗ್ಗೆ ಗ್ರಾಮ ಪ್ರತಿನಿಧಿಗಳಿಂದ ಕೇಳಿ ಬಂದ ಬೇಡಿಕೆಗೆ ಪ್ರತಿಕ್ರಿಹಿಸಿದ ಸಚಿವರು, ಟ್ಯಾಂಕ್ ನಿರ್ಮಾಣಕ್ಕೆ ಸಮಯವಾಕಾಶ ಬೇಕಾಗಿದೆ. ಇದೀಗ ನೀರಿನ ಸಮಸ್ಯೆ ಪರಿಹರಿಸಲು ತುತರ್ು ಕ್ರಮ ತೆಗೆದುಕೊಳ್ಳಿ. ಟ್ಯಾಂಕ್ ನಿರ್ಮಾಣದ ಅಗತ್ಯ ಇದ್ದರೆ ಜಿಪಂ ಮೂಲಕ ಪ್ರಸ್ತಾವಣೆ ಸಲ್ಲಿಸಿ. ಶಾಸ್ವತ ಕುಡಿಯುವ ನೀರಿನ ಅಗತ್ಯವಿದ್ದರೆ ಅದಕ್ಕೆ ಬೇಕಾದ ಅನುದಾನವನ್ನು ಸರಕಾರದಿಂದ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಜಿಲ್ಲಾ ಮಟ್ಟದ ಎಂಜಿಯರ್ಗಳು ಕೆಲಸದ ಒತ್ತಡದ ಕಾರಣ ಗ್ರಾಮಾಂತರ ಪ್ರದೇಶಗಳ ಸಮಸ್ಯೆಗಳಿಗೆ ಅವರಿಂದ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರತೀ ಗ್ರಾಮಕ್ಕೊಂದು ಎಂಜಿನಿಯರ್ಗಳನ್ನು ನೇಮಿಸಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿ ಬಂದವು. ಇದಕ್ಕೆ ಪ್ರತಿಕ್ರಿಯಿಸಿ ಸಚಿವರು, ಗ್ರಾಮಕ್ಕೊಂದು ಎಂಜಿನಿಯರ್ ನೇಮಿಸುವುದು ಅಸಾಧ್ಯವಾಗಿದೆ. ಗ್ರಾಪಂ ಸದಸ್ಯರು ಗ್ರಾಮದ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಪಟ್ಟಿ ಮಾಡಿ ಸಂಬಂಧಿಸಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರು ಖಂಡಿತಾ ಸ್ಪಂದಿಸುತ್ತಾರೆ ಎಂದು ಹೇಳಿದರು.
ಮಂಗಳೂರು ನಗರಕ್ಕೆ ನೀರು ಕೊಡುವ ತುಂಬೆ ಗ್ರಾಮದ ಜನರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಗ್ರಾಪಂಗೆ ತೆರಿಗೆಯೂ ಕಟ್ಟದೆ, ಕುಡಿಯಲು ನೀರು ಕೊಡದೆ ಮನಾಪ ತುಂಬೆ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ತುಂಬೆ ಗ್ರಾಮ ಉಪಾಧ್ಯಕ್ಷರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೃಹತ್ ನೀರು ಸರಬರಾಜು ಆಗುವ ಪೈಪುಗಳು ಹಾದು ಹೋಗುವ ಎಲ್ಲ ಗ್ರಾಮಗಳಿಗೆ ನೀರು ಪೂರೈಸಬೇಕೆಂದು ಸರಕಾರ ತೀಮರ್ಾನಿಸಿದೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ತೆಗೆಯಲಾಗುವುದು ಎಂದು ಭರವಸೆ ನೀಡಿದರು.
ಶ್ರೀಮಂತರು ಕೊರೆಸುವ ಬೋರ್ವೆಲ್ನ ನೀರು ಕುಡಿಯಲು ಯೋಗ್ಯವಾಗಿರುತ್ತದೆ. ಆದರೆ, ಸರಕಾರದಿಂದ ಕೊರೆಸಿದ ಬೋರ್ವೆಲ್ ನೀರು ದುರ್ವಾಸನೆ ಬೀರುವುದರಿಂದ ಕುಡಿಯಲು ಆಗುತ್ತಿಲ್ಲ ಎಂದು ಸಭೆಯಲ್ಲಿ ಕೇಳಿ ಬಂದ ಆರೋಪಕ್ಕೆ ಸಚಿವರು ಅಧಿಕಾರಿಗಳೊಂದಿಗೆ ವಿವರಣೆ ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಶ್ರೀಮಂತರು ಬೋರ್ಗೆ ಗುಣಮಟ್ಟದ ಫೈಬರ್ ಪೈಪ್ಗಳನ್ನು ಬಳಕೆ ಮಾಡುತ್ತಾರೆ. ಸರಕಾರ ಕಬ್ಬಿಣದ ಪೈಪ್ಗಳನ್ನು ಬಳಕೆ ಮಾಡುವುದರಿಂದ ಈ ಸಮಸ್ಯೆ ಉಂಟಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಂದಿನ ದಿನಗಳಲ್ಲಿ ಸರಕಾರದ ಅನುದಾನದಿಂದ ಕೊರೆಸುವ ಎಲ್ಲ ಬೋರ್ವೆಲ್ಗಳಿಗೆ ಗುಣಮಟ್ಟದ ಪೈಪ್ಗಳನ್ನು ಅಲವಡಿಸಿ ನೀರು ವಾಸನೆ ಬಾರದಂತ ನೋಡಿಕೊಳ್ಳಿ. ಅಲ್ಲದೆ, ಬೋರ್ವೆಲ್ ಕೊರೆಯುವಾಗ ಸ್ಥಳೀಯ ಪ್ರತಿನಿಧಿಗಳು ಸ್ಥಳದಲ್ಲೇ ನಿಂತು ಪೈಪ್ ಗುಣಮಟ್ಟ, ಆಳ ಮುಂತಾದವುಗಳನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಮತದಾರರ ಪಟ್ಟಿಯಲ್ಲಿರುವ ಗೊಂದಲ ಹಾಗೂ ಚುನಾವಣಾ ಚೀಟಿ ವಿತರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಭೆಯಲ್ಲಿ ಗ್ರಾಪಂ ಪ್ರತಿನಿಧಿಗಳು ಸಚಿವರ ಗಮನ ಸೆಳೆದರು. ಈ ಬಗ್ಗೆ ಮಾತನಾಡಿದ ಅವರು, ಎಲ್ಲ ಅಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರು ಸಮನ್ವಯದಿಂದ ಒಟ್ಟು ಸೆರಿ ಕೆಲಸ ಮಾಡಿದಾಗ ಇಂತಹ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ. ನೀರಿನ ಸಮಸ್ಯೆ ಇರುವುದರಿಂದ ರೋಗಗಳು ಹರಡುವ ಸಂಭವವಿದ್ದು, ಈ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಎಲ್ಲ ಹೊಟೇಲ್ಗಳಲ್ಲಿ ಬಿಸಿ ನೀರು ಖಡ್ಡಾಯವಾಗಿ ನೀಡುವಂತೆ ಅದೇಶ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

By Suddi9

Leave a Reply

Your email address will not be published. Required fields are marked *