ಕಂಚಿನಡ್ಕಪದವು ಸೈಟ್‍ನ 150 ಮನೆಗಳಿಗೆ ಕುಡಿಯುವ ನೀರು ಭಾಗ್ಯ
ಉಳ್ಳಾಲ: ಕಳೆದ ಹಲವಾರು ವರ್ಷಗಳಿಂದ ನೀರಿಗಾಗಿ ಪರದಾಡುತ್ತಿದ್ದ ಸಜಿಪನಡು ಗ್ರಾಮದ ಕಂಚಿನಡ್ಕ ಪದವು ಸೈಟ್ ನಿವಾಸಿಗಳಿಗೆ ಸುಮಾರು 2.5 ಲಕ್ಷ ರೂ. ವೆಚ್ಚದಲ್ಲಿ ಮಂಗಳೂರಿನ ಹೆಲ್ಪ್ ಇಂಡಿಯಾದ ವತಿಯಿಂದ ಬಾವಿ ನಿರ್ಮಿಸಿ ಕೊಟ್ಟಿದ್ದು, ರವಿವಾರ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ನೂತನ ಬಾವಿಯನ್ನು ಉದ್ಘಾಟಿಸಿದರು.

helpe India 01

helpe India 03

helpe India 05

helpe India 06ಸಚಿವ ಯು.ಟಿ.ಖಾದರ್ ಮಾತನಾಡಿ ಮಂಗಳೂರು ವಿಧಾನಸಭಾ ಕ್ಷೇತ್ರದ ಸಜಿಪನಡು ಗ್ರಾಮದ ಅತೀ ಎತ್ತರವಾದ ಪ್ರದೇಶದಲ್ಲಿರುವ ಕಂಚಿನಡ್ಕ ಪದವು ಸೈಟ್ ನಿವಾಸಿಗಳಿಗೆ ಮೂಲಭೂತ ಸೌಕರ್ಯದ ಕೊರತೆಯನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತಿದ್ದು, ರಸ್ತೆ ನಿರ್ಮಾಣ ಸೇರಿದಂತೆ ಕೆಲವೊಂದು ಮೂಲಭೂತ ಸೌಕರ್ಯವನ್ನು ಈಗಾಗಲೇ ಯಶಸ್ವಿಯಾಗಿ ನಡೆಸಿದೆ. ಆದರೆ ನೀರಿನ ಸಮಸ್ಯೆ ಪರಿಹಾರವಾಗಿರಲಿಲ್ಲ. ಹೆಲ್ಪ್ ಇಂಡಿಯಾ ಸಂಸ್ಥೆಯ ರಾಝಿಕ್ ಉಳ್ಳಾಲ್ ಸಮಾಜಕ್ಕೆ ಕೊಡುಗೆಯಾಗಿ ದಾನಿಯೋರ್ವರು ನೀರಿನ ಶಾಶ್ವತ ಯೋಜನೆಯನ್ನು ಮಾಡುವ ಇರಾದೆಯನ್ನು ತಿಳಿಸಿದ್ದರು. ಈ ಹಿನ್ನಲೆಯಲ್ಲಿ ರಾಝಿಕ್ ಅವರಿಗೆ ಈ ಸ್ಥಳದಲ್ಲಿ ನೀರಿನ ಶಾಶ್ವತ ಯೋಜನೆ ನಡೆಸಲು ಕೇಳಿಕೊಂಡತೆ ಬಾವಿ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸೈಟ್ ನಿವಾಸಿಗಳ ಉಪಯೋಗಕ್ಕೆ ಬಿಟ್ಟು ಕೊಟ್ಟಿದ್ದು, ಈ ಬಾವಿಯನ್ನು ಇಲ್ಲಿನ ನಿವಾಸಿಗಳು ಸಮಾಜದ ಆಸ್ತಿ ಸಂಪತ್ತಿನಂತೆ ರಕ್ಷಿಸುವ ಕಾರ್ಯ ಮಾಡಬೇಕು ಎಂದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಎಸ್. ಆಬ್ಬಾಸ್ ಮಾತನಾಡಿ ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಹಲವಾರು ಯೋಜನೆಯನ್ನು ನಡೆಸಿದ್ದು, ಬೋರ್‍ವೆಲ್, ನಳ್ಳಿ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬೋರ್‍ವೆಲ್‍ನಲ್ಲಿ ನೀರು ಕಡಿಮೆಯಾಗಿದ್ದರಿಂದ ಈ ವ್ಯಾಪ್ತಿಯ ಜನರಿಗೆ ನೀರಿನ ಸಮಸ್ಯೆಯಿತ್ತು. ಆದರೆ ನೂತನ ಬಾವಿ ನಿರ್ಮಾಣದಿಂದ ಉತ್ತಮ ನೀರಿನ ವ್ಯವಸ್ಥೆ ಬಾವಿಯಲ್ಲಿದ್ದು, ಸ್ಥಳೀಯರಿಗೆ ಸಹಕಾರಿಯಾಗಲಿದೆ ಎಂದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿ ಯು.ಟಿ.ಖಾದರ್ ಕ್ಷೇತ್ರದಲ್ಲಿ ಅಭಿವೃದ್ಧಿಯ ಶಕೆ ಆರಂಭವಾಗಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಇಂತಹ ಸಂಸ್ಥೆಗಳು ಮುಂದೆ ಬಂದಾಗ ಸುಂದರ ಮಂಗಳೂರು ಕ್ಷೇತ್ರ ನಿರ್ಮಾ ಸಾಧ್ಯ ಎಂದರು. ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಸೊಮೇಶ್ವರ, ವಕ್ಪ್ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜಿಪ, ತಾಲೂಕು ಪಂಚಾಯತ್ ಸದಸ್ಯರಾದ ಸವೀತಾ ಹೇಮಂತ್ ಕರ್ಕೇರ, ಹೈದರ್ ಕೈರಂಗಳ, ಚೇಳೂರು – ಸಜಿಪಪಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹೆನ್ರಿ ಡಿ.ಸೋಜ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ಕುಕ್ಕಾಜೆ , ಸಜಿಪ ನಡು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಗೋಳಿಪಡ್ಪು ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ರಫೀಕ್, ಮುಡಿಪು ಬ್ಲಾಕ್ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಜಲೀಲ್ ಮೋಟುಂಗೋಳಿ, ಸಜಿಪ ನಡು ಗ್ರಾಮ ಪಂಚಾಯತ್‍ನ ಮಾಜಿ ಸದಸ್ಯ ಸತ್ತಾರ್, ಮುಡಿಪು ಬ್ಲಾಕ್ ಕಾಂಗ್ರೆಸ್‍ನ ಕಾರ್ಮಿಕ ಘಟಕದ ಅಧ್ಯಕ್ಷ ನಾಸೀರ್ ನಡುಪದವು, ಕುರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಝುಬೈರ್ ತಲೆಮೊಗರು, ಮದನಿ ನಗರ ಜುಮಾ ಮಸೀದಿಯ ಅಧ್ಯಕ್ಷ ಯು.ಕೆ. ಮಹಮ್ಮದ್, ಉದ್ಯಮಿ ಯು.ಎಚ್. ಹಸೈನಾರ್, ಹೆಲ್ಪ್ ಇಂಡಿಯಾ ಫೌಂಡೇಶನ್ ರಾಝಿಕ್ ಉಳ್ಳಾಲ್, ಸಿರಾಜ್, ಮುಸ್ತಾಫ, ಅಬ್ದುಲ್ ಕಮಾಲ್ ಉಪಸ್ಥಿತರಿದ್ದರು.
ಬಾಕ್ಸ್ : ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ನೀರಿನ ಯೋಜನೆಗೆ ದಾನಿಯೊಬ್ಬರು ಮುಂದೆ ಬಂದ ಹಿನ್ನಲೆಯಲ್ಲಿ ಸಚಿವ ಯು.ಟಿ.ಖಾದರ್ ಮಾಹಿತಿಯಂತೆ ಕಂಚಿನಡ್ಕ ಪದವು ಸೈಟ್‍ಗೆ ಕುಡಿಯುವ ನೀರಿನ ಯೋಜನೆಗೆ ಬಾವಿಯನ್ನು ನಿರ್ಮಿಸಿ ಹಸ್ತಾಂತರಿಸಿದ್ದು, ಈ ಯೋಜನೆಯಿಂದ ಸುಮಾರು 150 ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ.

By Suddi9

Leave a Reply

Your email address will not be published. Required fields are marked *