ಬಂಟ್ವಾಳ : ಮತಾಂತರದ ಶಂಕೆಯ ಹಿನ್ನೆಲೆಯಲ್ಲಿ ಬಂಟ್ವಾಳದ ಗ್ರಾಮಾಂತರದ ಪೊಲೀಸರು ಸರಪಾಡಿ ಗ್ರಾ.ಪಂ.ವ್ಯಾಪ್ತಿಯ ಪೆರ್ಲಬಿಯಪಾದೆ ಬಡಲಾಂ ಎಂಬಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿದ ಘಟನೆ ಸೋಮವಾರ ಸಂಭವಿಸಿದೆ. ಇಲ್ಲಿನ ವ್ಯಕ್ತಿಯೋರ್ವರು ಈ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು ಬಳಿಕ ಅವರ ಮನೆಯಲ್ಲಿ ಪ್ರತೀವಾರ ಪ್ರಾರ್ಥನೆ ನಡೆಸುವ ಮೂಲಕ ಕ್ರೈಸ್ತ ಧರ್ಮ ಪ್ರಚಾರ ಮತ್ತು ಮತಾಂತರದ ಹುನ್ನಾರ ಇರುವುದಾಗಿ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲ್ಲಿ ದಾಳಿ ನಡೆಸಿ ವಿಚಾರಣೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲಿ ಅಂತಹ ಯಾವುದೇ ಚಟುವಟಿಕೆಗಳು ವಿಚಾರಣೆಯ ವೇಳೆ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸೂಕ್ತ ಕ್ರಮಕ್ಕೆ ವಿಶ್ವ ಹಿಂದು ಪರಿಷತ್ ಆಗ್ರಹ : ಪೆರ್ಲಬಿಯಪಾದೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾತಂತರದ ಹುನ್ನಾರ ನಡೆಯುತ್ತಿದ್ದು ಇದನ್ನು ವಿಶ್ವ ಹಿಂದು ಪರಿಷತ್ ಖಂಡಿಸುತ್ತಿದ್ದು ಈ ಚಟುವಟಿಕೆಗಳನ್ನು ನಿಲ್ಲಿಸಲು ಪೊಲೀಸರು ತತ್ಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದು ಪರಿಷತ್ನ ಬಂಟ್ವಾಳ ಪ್ರಖಂಡದ ಸಂಚಾಲಕ ಅಶೋಕ ಶೆಟ್ಟಿ ಸರಪಾಡಿ ಅವರು ಪೊಲೀಸರನ್ನು ಆಗ್ರಹಿಸಿದ್ದಾರೆ

By suddi9

Leave a Reply

Your email address will not be published. Required fields are marked *