ಮೂಲ್ಕಿ; (ಮೇ.25) ಎರಡನೇ ಬಾರಿಗೆ ಸಂಸದನಾಗಿ ಆಯ್ಕೆಗೊಂಡ ತಾನು ತನ್ನ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವ ಸಂಸದನಾಗಿ ಉಳಿದುಕೊಳ್ಳಲು ಇಚ್ಚಿಸಿದ್ದೇನೆಯೇ ಹೊರತು ಸಚಿವನಾಗಿ ಯಾವುದೇ ಹುದ್ದೆಯನ್ನು ಬಯಸಿಲ್ಲ, ದಕ್ಷಿಣಕನ್ನಡ ಕ್ಷೇತ್ರವನ್ನು ಕಳೆದ ವರ್ಷಕ್ಕಿಂತ ಇನ್ನಷ್ಟು ಹೆಚ್ಚು ಅಭಿವೃದ್ಧಿಗೊಳಿಸಿ ಕ್ಷೇತ್ರವನ್ನು ದೇಶದ ಅಗ್ರ ಶ್ರೇಯಾಂಕದಲ್ಲಿ ನಿಲ್ಲಿಸುವ ಬಗ್ಗೆ ಯೋಜನೆಯನ್ನು ರೂಪಿಸಿಕೊಂಡಿದ್ದು ನಮ್ಮದೇ ಸರ್ಕಾರ ಹಾಗೂ ನರೇಂದ್ರ ಮೋದಿಯವರ ದೂರ ದೃಷ್ಟಿತ್ವದಿಂದ ಹೊಸ ಹೊಸ ಯೋಜನೆಗಳು ಜಿಲ್ಲೆಗೂ ಬರಲಿದೆ ಎಂಬ ವಿಶ್ವಾಸದಿಂದ ಈ ಬಾರಿ ಕಾರ್ಯೋನ್ಮುಖನಾಗಿದ್ದೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

nalin
ಅವರು ಭಾನುವಾರ  ಬೆಳಿಗ್ಗೆ ಸಂಸದನಾಗಿ ಎರಡನೇ ಬಾರಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿ ಮಾಧ್ಯಮದೊಂದಿಗೆ ಮಾತನಾಡಿದರು.  ಎಲ್ಲಾ ವಿರೋಧಿಗಳಿಗೆ ತನ್ನ ಗೆಲುವಿನ ಮೂಲಕ ಪಕ್ಷ ಹಾಗೂ ಕಾರ್ಯಕರ್ತರು ಸ್ಷಷ್ಟ ಉತ್ತರ ನೀಡಿದ್ದಾರೆ. ಸಂಸದನಾಗಿ ಎರಡನೇ ಬಾರಿ ಅವಕಾಶ ಪಡೆದಿರುವುದನ್ನು ಸಮರ್ಥವಾಗಿ ಕಳೆದ ಬಾರಿಯಂತೆಯೇ ನಿಭಾಯಿಸುವ ಶಕ್ತಿಯನ್ನು ಜನತೆ ನೀಡಿದ್ದಾರೆ. ಕಳೆದ ಬಾರಿಯ ಹಲವಾರು ಯೋಜನೆಗಳು ಸಹ ಪೂರ್ಣಗೊಳಿಸಲು ಅನುಕೂಲವಾಗಿದೆ ಗ್ರಾಮೀಣ ಭಾಗದ ಜನಪರ ಯೋಜನೆಗಳು ಈ ಬಾರಿ ಹೆಚ್ಚಾಗಿ ಬರುವ ಸಾಧ್ಯತೆ ಇದ್ದು ಇದಕ್ಕೆಲ್ಲಾ ಪೂರಕವಾಗಿ ಗ್ರಾಮದ ಕಾರ್ಯಕರ್ತರ ಮೂಲಕ ಬೇಡಿಕೆಗಳ ಪಟ್ಟಿಯನ್ನು ಸಹ ತಯಾರು ಮಾಡಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರ ನಿಡ್ಡೋಡಿ ಯೋಜನೆಯನ್ನು ಬಲವಂತವಾಗಿ ಜಾರಿಗೆ ತರಲು ಉದ್ದೇಶಿಸಿತ್ತು ಚುನಾವಣಾ ನಂತರ ಈಗ ಯೋಜನೆ ಕೈ ಬಿಟ್ಟಿದ್ದೇವೆ ಎಂದು ಮುಖ್ಯಮಂತ್ರಿಯವರು ಸಹ ಸ್ಪಷ್ಟನೆ ನೀಡಬೇಕು, ನಿಡ್ಡೋಡಿ ಹಾಗೂ ಎತ್ತಿನಹೊಳೆ ಯೋಜನೆಯನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವ ಪ್ರಶ್ನೆಯೇ ಇಲ್ಲ ಕೇಂದ್ರದಲ್ಲಿ ಮೋದಿ ಸರ್ಕಾರ  ವಿರುವುದರಿಂದ ಈ ಬಗ್ಗೆ ನಿರ್ದಿಷ್ಟವಾದ ಮಾಹಿತಿ ನೀಡುತ್ತೇನೆ ಜೊತೆಗೆ ಕೃಷಿಯ ವಿಶೇಷ ವಿತ್ತ ವಲಯವನ್ನು ಸ್ಥಾಪಿಸಲು ಪ್ರಯತ್ನವನ್ನು ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಸದರೊಂದಿಗೆ  ಕೆ.ಭುವನಾಭಿರಾಮ ಉಡುಪ, ಈಶ್ವರ ಕಟೀಲು, ಆದರ್ಶ ಶೆಟ್ಟಿ ಎಕ್ಕಾರು, ದೇವಪ್ರಸಾದ ಪುನರೂರು, ಸತೀಶ್ ಅಂಚನ್, ಸುನಿಲ್ ಆಳ್ವಾ, ಪುರುಷೋತ್ತಮ ರಾವ್, ಹರ್ಷರಾಜ್ ಶೆಟ್ಟಿ, ಜಗದೀಶ್ ಅಧಿಕಾರಿ, ಕಸ್ತೂರಿ ಪಂಜ, ರಂಗನಾಥ ಶೆಟ್ಟಿ, ನವೀನ್ ರಾಜ್ ಬಪ್ಪನಾಡು, ವನಿತಾ ಉದಯ, ಪ್ರೇಮಾ ಸುಂದರ ಕೋಟ್ಯಾನ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ಉದಯ ಅಮಿನ್ ಮಟ್ಟು, ಶರತ್ ಕುಬೆವೂರು, ಯಾದವ ಕೋಟ್ಯಾನ್, ಲೀಲಾ ಬಂಜನ್, ಮೋಹನ್ ಕುಬೆವೂರು, ಮನೋಜ್ಕುಮಾರ್, ಸೋಮನಾಥ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.
ನಂತರ ಸಂಸದ ನಳಿನ್ ಕುಮಾರ್ ಕಟೀಲು ಹಳೆಯಂಗಡಿ ಬಳಿಯ ತೋಕೂರು ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು.

By suddi9

Leave a Reply

Your email address will not be published. Required fields are marked *